ಉದಯವಾಹಿನಿ ಮಸ್ಕಿ: ತಾಲೂಕಿನ ಸಂತೆಕೆಲ್ಲೂರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ‌ ಬುಧುವಾರ ಬೆಳಿಗ್ಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಇರುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಂಬಮ್ಮ, ನಾಗರತ್ನ ಇವರಿಬ್ಬರು ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಿದರು. ಒಟ್ಟು 21ಮತಗಳಲ್ಲಿ‌ ಅಂಬಮ್ಮ ಅವರು 11ಮತವನ್ನು ಪಡೆದುಕೊಂಡು‌ ವಿಜಯ ಶಾಲಿಯಾದರು, ನಾಗರತ್ನ‌ ಅವರು 9ಮತ ಪಡೆಯುವುದರ ಮೂಲಕ ಪರಾಭವಗೊಂಡರು.ಎಸ್ಟಿ ಮೀಸಲು ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯಲಕ್ಷ್ಮಿ ಸಂತೆಕೆಲ್ಲೂರು ಅವರು ಅರೋಧವಾಗಿ ಆಯ್ಕೆಯಾದರು.ಈ ವೇಳೆ ಕೆಪಿಸಿಸಿ ಎಸ್ಟಿ ಘಟಕ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರವಿಹಾಳ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ದಾವೂದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅದನಗೌಡ ಸಂತೆಕಲ್ಲೂರ,ಮಲ್ಲನಗೌಡ ಹಳ್ಳಿ, ಗ್ರಾಪಂ ಸದಸ್ಯ ಬಸವರಾಜ, ಹಜರತಸಾಬ ದಿನ್ನೆಬಾವಿ ಸೇರಿದಂತೆ ಇನ್ನಿತರಿದ್ದರು

Leave a Reply

Your email address will not be published. Required fields are marked *

error: Content is protected !!