
ಉದಯವಾಹಿನಿ ದೇವದುರ್ಗ: ಕರ್ನಾಟಕ ರಾಜ್ಯ ಸರಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೇಡಿಕೆಗಳಿಗೆ ಸ್ಪಂದಿಸಿ, ಸಂಜೆವತ್ತಿಗೆ ಆದೇಶವನ್ನು ಹಿಂಪಡಿದಿರುವ ಕಲಬುರಗಿ ಜೆಸ್ಕಾಂ ಇಲಾಖೆ ನಿರ್ದೇಶಕರ ಸರ್ವಾಧಿಕಾರ ಧೋರಣೆ ಖಂಡಿಸಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬುಧವಾರ ಕಚೇರಿ ಮುಂದೆ ಪ್ರತಿಭಟಿಸಿ ಪ್ರಭಾರ ಎಇಇ ವೆಂಕಟೇಶ ಅವರಿಗೆ ಮನವಿ ಸಲ್ಲಿಸಿದರು. ಒಂದರಿಂದ ಐದು ಲಕ್ಷದವರೆಗೆ ಯಾವುದೇ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ಮಾಡದೇ ಜೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಕೆಲಸ ನೀಡಬೇಕು. ಇನ್ನು ಕೈಬಿಟ್ಟಿರುವ ಬೇಡಿಕೆಗಳು ಕೊಡಲೇ ಸ್ಪಂದಿಸಬೇಕು. ವಿನಾಕಾರಣ ಗುತ್ತಿಗೆದಾರರ ಮೇಲೆ ಯಾವುದೇ ಒತ್ತಡಗಳು ಹಾಕಬಾರದು ಎಂದು ದೂರಿದರು. ಹೋರಾಟ ಕೈಗೊಂಡಾಗ ಬೇಡಿಕೆಗಳಿಗೆ ಸ್ಪಂದಿಸಿ ಅದೇ ಸಂಜೆ ಆದೇಶವನ್ನು ಹಿಂಪಡಿದಿರುವ ಆದೇಶ ಮುಂದುವರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಇಕ್ಬಾಲ್ ಅಹ್ಮದ್, ಶರಣಪ್ಪ ಹೊಟ್ಟಿ, ಬಸವಲಿಂಗ, ರಾಜಶೇಖರಯ್ಯ ಸ್ವಾಮಿ, ಮರಿಯಪ್ಪ, ಎನ್.ಎಸ್. ಕೋರಿ, ಅಯ್ಯಪ್ಪ ಪೂಜಾರಿ, ತಾಹೇರ್ ಅಹ್ಮದ್, ಚನ್ನಪ್ಪ ಭಜಂತ್ರಿ ಸೇರಿ ಇತರರು ಇದ್ದರು.
