ಉದಯವಾಹಿನಿ ಮುದಗಲ್ : ಹುಸೇನಿ ಆಲಂ ಆಶೂರ್ ಖಾನ ದರ್ಗದಲ್ಲಿ ಪ್ರಸಕ್ತ ವರ್ಷದ ಮೊಹರಂ ಹುಂಡಿಯಲ್ಲಿ ಭಕ್ತರು ಹಾಕಿರುವ ಕಾಣಿಕೆಯನ್ನು ಕಮಿಟಿಯವರು ಮ0ಗಳವಾರ ಎಣಿಕೆ ಮಾಡಿದರು.ಮೊಹರಂ ಹುಸೇನಿ ಆಲಂ ದರ್ಗಾದಲ್ಲಿನ ಹುಂಡಿಗಳಿಗೆ ಪ್ರಸಕ್ತ ವರ್ಷ ಹುಂಡಿಗಳಲ್ಲಿ ಬಂದ ಕಾಣಿಕೆ ಇದುವರೆಗಿನ  ದಾಖಲೆಯ ಮೊತ್ತದ ಕಾಣಿಕೆ ಭಕ್ತರಿಂದ ಬಂದಿದ್ದು, ಕಾಣಿಕೆಗೆ ಹೋಲಿಸಿದಲ್ಲಿ ಅತ್ಯಧಿಕ ಮೊತ್ತವಾಗಿದೆ.ಕಳೆದ ವರ್ಷ 9ಲಕ್ಷ 92ಸಾವಿರದ 554 ರೂ.ವರೆಗೆ ಕಾಣಿಕೆಯಾಗಿತ್ತು.ಇದುವರೆಗೂ ಬಂದ ದೊಡ್ಡ ಮೊತ್ತ ಇದಾಗಿದೆ. ಹುಸೇನಿ ಆಲಂ ಆಶೂರ್ ಖಾನ ದರ್ಗಾದಲ್ಲಿ ಮಂಗಳವಾರ ಹಣದ ಎಣಿಕೆ ನಡೆಸಿದಾಗ 10ಲಕ್ಷ 86ಸಾವಿರದ 632 ರೂ.ಹುಂಡಿಗಳಲ್ಲಿನ ಬಂದಿದ್ದು,ಕಳೆದ ವರ್ಷ ಕ್ಕಿಂತ ಹೆಚ್ಚಿನ ಕಾಣಿಕೆ ಬಂದಿದೆ. ಒಂದು ಬೆಳ್ಳಿ ಚೈನಾ ಕಾಣಿಕೆಯಾಗಿ ಬಂದಿದೆ.
ಬೆಳ್ಳಿಯನ್ನು ಭಕ್ತರು ಹುಸೇನಿ ಆಲಂ ದೇವರಿಗೆ ಸಮರ್ಪಿಸಿದ್ದಾರೆ. ಹಣ ಎಣಿಕೆ ಕಾರ್ಯವನ್ನು ವಕ್ಫಂಡ್ ಇಲಾಖೆ ಅಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದರು. ಪೊಲೀಸ್ ಬಿಗಿ ಬಂದೋ ಬಸ್ತು ಮಾಡಲಾಗಿತ್ತು. ಹಸೇನಿ ಆಲಂ, ಅಶೂರ್ಖಾನ ಕಮಿಟಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಕಾರ್ಯದರ್ಶಿ ಸಾಧಿಕ್ ಅಲಿ, ಗಯಾಸುದ್ದೀನ್, ಮಸೂಮ್ ಷರೀಫ್, ಯಮನೂರ ನದಾಫ್, ಅಜ್ಮೀರ್ ಹೊಸಮನಿ, ಶಂ ಶಾಲಾಮ್, ಮಂಡಿ ಖಾಜಾ ಹುಸೇನ್, ರಜ್ಜಬ್, ಶೋಯತ್ ಅಕ್ತರ, ಸಲೀಂ ಪಾಷಾ, ಹೈದರ್ ಸಾಬ್, ಮೌಲಾಸಾಬ್, ಹಸನ್ಮಿಯ, ಸಾಬೀರ್ ಪಾಷಾ, ಪಾಷ ಡಿಡಿಎಂ, ರೆಹಮಾನ್, ಮುಜಾವರ ಆಲಂಬ್ರದರ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!