ಉದಯವಾಹಿನಿ ದೇವರಹಿಪ್ಪರಗಿ: ಒಂದು ಸರ್ಕಾರ ಮಾಡಲಾರದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು. ಪಟ್ಟಣದ 1008 ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ನಡೆದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಿಂದಗಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ದೇವರಹಿಪ್ಪರಗಿ, ಜಿಲ್ಲಾ ಜನ ಜಾಗೃತಿ ವೇದಿಕೆ ವಿಜಯಪುರ, ಪ ಪಂ ಸರ್ವ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಯೋಗದೊಂದಿಗೆ 1699ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಯುವ ಸಮೂಹ ಹೆಚ್ಚಾಗಿದ್ದು.ಸದೃಢ ದೇಶ ನಿರ್ಮಾಣಮಾಡುವ ಯುವ ಶಕ್ತಿ ಸಬಲರಾಗಬೇಕು.ಮನುಷ್ಯ ಚಿಕ್ಕ ವಯಸ್ಸಿನಲ್ಲಿ ಮುಗ್ಧತೆ ಯಿಂದ ಕೂಡಿರುತ್ತಾನೆ. ಉದ್ದೇಶಪೂರ್ವಕವಾಗಿ ಯಾರೊಬ್ಬರೂ ಮದ್ಯವ್ಯಸನಿಯಾಗುವುದಿಲ್ಲ. ಕೆಲ ಪರಿಸ್ಥಿತಿಗಳ ಕೈಗೊಂಬೆಯಾಗಿ. ಸಮಾಜದಲ್ಲಿ ಸಹವಾಸ,ಸಮಸ್ಯೆಗಳಿಂದ ದುಶ್ಚಟಗಳಿಗೆ ಬಲಿಯಾ ಗುತ್ತಾನೆ.ಸ್ವಯಂ ಪ್ರೇರಿತರಾಗಿ ನಿಮ್ಮ‌ಜೀವನ ರೂಪಿಸಿಕೊಂಡು ಯುವ ಸಮೂಹ ದುಶ್ಚಟಗಳಿಂದ ಮುಕ್ತರಾಗಬೇಕು ಹಾಗೂ ಧರ್ಮಸ್ಥಳ ಸಂಘ ಆರ್ಥಿಕ‌ ಸಾಲ ಸೌಲಭ್ಯದ ಜೊತೆಗೆ ಸಮಾಜ ಮುಖಿ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟಣದ ಸದಯ್ಯನ ಮಠದ ಷ ಬ್ರ ವೀರಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಯುವ ಸಮೂಹ ಆಮಿಷಕ್ಕೊಳಗಾಗಿ ದುಶ್ಚಟಕ್ಕೆ ಬಲಿಯಾಗದೆ ನಿತ್ಯ ಕಾಯಕದಲ್ಲಿ ತೊಡಗಿ ಕೊಂಡು ದುಡಿಮೆ ಹಣದಿಂದ ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಆಶೀರ್ವಾಚನ‌ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಪ್ರಾದೇಶಿಕ ನಿರ್ದೇಶಕರಾದ ಜಯಂತ ಪೂಜಾರಿ ಮಾತನಾಡಿ, ಮದ್ಯವರ್ಜನ ಶಿಬಿರದಿಂದ 48 ಜನ ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆಯವರ ಆಶಯದಂತೆ ಶಿಬಿರದಿಂದ ಹೊರಬಂದ ಮೇಲೆ ಮತ್ತೊಬ್ಬರ ಪ್ರಚೋದನೆಗೆ ಬಲಿಯಾಗಿ ಪುನಃ ಕುಡಿತದ ಪ್ರಪಂಚದ ಕೂಪಕ್ಕೆ ಬೀಳಬೇಡಿ ಎಂದು ಶುಭಕೋರಿದರು. ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಚಾಕ್ಷರಿ ಶಿ ಮಿಂಚನಾಳ ಮಾತನಾಡಿ ಶಿಬಿರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷರಾದ ಡಾ ಆರ್ ಆರ್ ನಾಯಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಚನ್ನವೀರ ಕುದುರಿ,ಪ ಪಂ ಸದಸ್ಯರಾದ ಶಾಂತಯ್ಯ ಜಡಿಮಠ, ಜಿಲ್ಲಾ ಪ್ರಾ ಶಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ ಎಸ್ ಬೇವನೂರ, ತಾಲೂಕು ಘಟಕದ ಅಧ್ಯಕ್ಷರಾದ ಎ ಎಚ್ ವಾಲಿಕಾರ,ಪ ಪಂ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ, ಮುಖಂಡರುಗಳಾದ ಬಸಯ್ಯ ಮಲ್ಲಿಕಾರ್ಜುನ ಮಠ, ಶಾಂತಗೌಡ ಯರನಾಳ, ಸಂಗಮೇಶ ಹಳೆಮನೆ, ಶಿವಶಂಕರ ರೂಗಿ, ವೀರೇಶ ಕುದುರಿ, ಧರ್ಮಸ್ಥಳ ಯೋಜನಾಧಿಕಾರಿಗಳಾದ ಗಿರೀಶಕುಮಾರ ಎಂ , ದಿವಾಕರ್ ಪೂಜಾರಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಶಿಬಿರಾರ್ಥಿಗಳು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!