ಉದಯವಾಹಿನಿ, ಲಂಡನ್ ಸೇರಿದಂತೆ ಯುಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸುವವರಿಗಾಗಿ ಬ್ರಿಟಿಷ್ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಈ ಸ್ಕಾಲರ್‌ಶಿಪ್‌ಗಳು ನಿಮ್ಮ ಬೋಧನಾ ಶುಲ್ಕ ಮಾತ್ರವಲ್ಲದೆ, ವಾಸದ ವೆಚ್ಚವನ್ನೂ ಭರಿಸಬಲ್ಲವು. ಆದ್ದರಿಂದ ಭಾರತೀಯ ವಿದ್ಯಾರ್ಥಿಗಳಿಗಾಗಿ ‘ಬ್ರಿಟಿಷ್ ಸ್ಕಾಲರ್‌ಶಿಪ್ 2026’ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ಬ್ರಿಟಿಷ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ವಿದ್ಯಾರ್ಥಿವೇತನವಾಗಿದೆ. ನಾಯಕತ್ವದ ಗುಣ ಹೊಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿ (Master’s) ಮಾಡಲು ಇದು ಸಂಪೂರ್ಣ ಆರ್ಥಿಕ ನೆರವು ನೀಡುತ್ತದೆ.ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಇದನ್ನು ನೀಡಲಾಗುತ್ತದೆ. ಇದು ಬೋಧನಾ ಶುಲ್ಕ, ವಿಮಾನ ಪ್ರಯಾಣ ವೆಚ್ಚ ಮತ್ತು ಜೀವನ ನಿರ್ವಹಣಾ ಭತ್ಯೆಯನ್ನು ಒಳಗೊಂಡಿರುತ್ತದೆ.
ಯುಕೆಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿದ್ಯಾರ್ಥಿವೇತನವಿದು. ಇದು ಕನಿಷ್ಠ 10,000 ಪೌಂಡ್‌ಗಳಷ್ಟು ಆರ್ಥಿಕ ನೆರವು ನೀಡುತ್ತದೆ.
