ಉದಯವಾಹಿನಿ, ಪಶ್ಚಿಮ ಏಷ್ಯಾದಲ್ಲಿ ಯುದ್ಧಭೀತಿಯ ವಾತಾವರಣ ಮುಂದುವರಿದಿರುವ ನಡುವೆಯೇ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿ ಕುರಿತು ಇರಾನ್ ಮಹತ್ವದ ಹೇಳಿಕೆ ನೀಡಿದೆ.
ವಾಣಿಜ್ಯ ಹಡಗುಗಳ ಸಂಚಾರಕ್ಕೆ ಯಾವುದೇ ತಡೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಇರಾನ್, ಎಲ್ಲಾ ಹಡಗುಗಳು ತಮ್ಮ ನೌಕಾಪಡೆಯೊಂದಿಗೆ ಸಮನ್ವಯ ಮಾಡಿಕೊಂಡು ಸಾಗಬೇಕು ಎಂದು ತಿಳಿಸಿದೆ.
ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೆ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಫ್ಟಿ, ಅಮೆರಿಕದ ನಿರ್ಬಂಧಗಳು ಮತ್ತು ಪ್ರಾದೇಶಿಕ ಸಂಘರ್ಷದಿಂದ ಪರಿಸ್ಥಿತಿ ಸಂಕೀರ್ಣಗೊಂಡಿದೆ ಎಂದರು. ಆದರೂ ಜಲಮಾರ್ಗವನ್ನು ಬಂದ್ ಮಾಡುವ ಉದ್ದೇಶ ಇರಾನ್‌ಗೆ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!