ಉದಯವಾಹಿನಿ ಮಹಾಲಕ್ಷ್ಮೀ ಲೇಔಟ್:  ವಿಧಾನಸಭಾ ಕ್ಷೇತ್ರದ ನಾಗಪುರದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಇಂದು ಸನಾತನ ಹಿಂದೂ ಪರಿಷತ್ ( ರಿ ) ವತಿಯಿಂದ ಸಮಾನ ಸಂಸ್ಕಾರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ವ್ಯಕ್ತಿತ್ವದ ಪರಿಪೂರ್ಣ ವಿಕಸನಕ್ಕಾಗಿ ಮತ್ತು ವಿಶ್ವ ಮಾನವ ತತ್ವದ ಜಾಗೃತಿಗಾಗಿ ಹಾಗೂ ಪರಿಪೂರ್ಣ ಜೀವನಕ್ಕಾಗಿ ” ಪಂಚ ಪ್ರಾಣ ವಿಧಿಗಳು” ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇದರ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಸ್ತಾರ ಖಾಸಗಿ ಕನ್ನಡ ವಾರ್ತಾ ವಾಹಿನಿಯ ಸಂಪಾದಕರಾದ “ಹರಿ ಪ್ರಕಾಶ್ ಕೋಣೆಮನೆ” ಅವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ವಿಶ್ವ ಮಾನವ ತತ್ವದ ಜಾಗೃತಿಗಾಗಿ ದೇವರು, ತಂದೆ ತಾಯಿ ಹಾಗೂ ಗೂರುಗಳ ಕುರಿತು ಮಕ್ಕಳು ತಮ್ಮ ಜೀವನದಲ್ಲಿ ಒಳ್ಳೆಯ ವಿಚಾರಗಳನ್ನ ಹಾಗೂ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಹಾಗೂ ವಿಭೂ ಅಕಾಡಮಿ ಯ ವಿ ಬಿ ಆರತಿ ರವರು ಹಾಗೂ ಶಿಕ್ಷಣ ತಜ್ಞ ರಾದ ಎನ್ ಸತ್ಯ ಪ್ರಕಾಶ್ ಮತ್ತು ಆಡಳಿತಾಧಿಕಾರಿ ಗಳು ಹರಿಹರಪುರ ಮಠದ ಬಿ ಎಸ್ ರವಿಶಂಕರ್, ಚಾತುರ್ಮಾಸ್ಯ ಸಮಿತಿ ಸಂಚಾಲಕರಾದ ರಾಘವೇಂದ್ರ ಭಟ್ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರಾದ ಎನ್ ವೆಂಕಟೇಶ್, ಶಿವಾನಂದ್ ಮೂರ್ತಿ , ವಿನೋದ್ ಕುಮಾರ್ ಸೇರಿದಂತೆ ಕ್ಷೇತ್ರದ ಹಲವು ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಾದ ಹರಿ ಪ್ರಕಾಶ್ ಕೋಣೆ ಮನೆ ಹಾಗೂ ಡಾ, ಆರತಿ ಬಿವಿ ಅವರನ್ನು ಚಾತುರ್ಮಾಸ್ಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!