ಉದಯವಾಹಿನಿ ಮಾಲೂರು:- ತಾಲೂಕಿನ ತೊರ‍್ನಹಳ್ಳಿ ಗ್ರಾಮದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳೀಯ ಮುಖಂಡರಿಂದ ಕಿರುಕುಳ. ಅಲ್ಲದೆ ನಿತ್ಯವೂ ಅಂಗಡಿ ತೆರವು ಮಾಡುವಂತೆ ಒತ್ತಾಯ.
ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಬೀದಿ ಬದಿಯ ಹೋಟೆಲ್ ಮಾಲೀಕರಾದ ರವಿಚಂದ್ರ ತಿಳಿಸಿದ್ದಾರೆ. ಮುಖ್ಯವಾಗಿ ನಾನು ಮಾಜಿ ಕುಮಾರಸ್ವಾಮಿ ರವರ ಅಭಿಮಾನಿ ಮೊದಲಿನಿಂದಲೂ ನಾನು ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ಯಾವುದೇ ಸ್ಥಳೀಯ ನಾಯಕರು ಬಂದರು ನಾನು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದೇನೆ. ಆದ್ದರಿಂದ ನಾನು ಬೇರೆ ಪಕ್ಷದವನು ಎನ್ನುವ ದುರುದ್ದೇಶದಿಂದ ಈ ರೀತಿ ಮಾಡುತ್ತಿರಬಹುದು ಎಂದು ದೂರಿದ್ದಾರೆ. ಇಲ್ಲಿ ರಾಜಕೀಯ ಬೇಡ ನಾನು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತಿದ್ದೇನೆ, ಶಾಸಕರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದಾನೆ ನನ್ನ ಹೋಟೆಲ್ ಅನ್ನು ಉಳಿಸಿಕೊಡಿ ಎಂದು ತಿಳಿಸಿದ್ದಾರೆ. ನಾನು ಯಾವತ್ತೂ ಕಾನೂನನ್ನು ಮೀರಿಲ್ಲ ಪ್ರಜಾಪ್ರಭುತ್ವದ ಅಡಿಯಲ್ಲೇ ನಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.ಈ ಸಂದರ್ಭದಲ್ಲಿ  ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ಸಂದೇಶ್ ರವರು ಮಾತನಾಡುತ್ತಾ ಮಾಲೂರು ತಾಲ್ಲೂಕಿನ ತೊರ‍್ನಹಳ್ಳಿ ಗ್ರಾಮದಲ್ಲಿ ಬೀದಿಬದಿ ಅಂಗಡಿ ಮತ್ತು ಹೋಟೆಲ್ ಮಾಲೀಕರ ಮೇಲೆ ಈ ರೀತಿಯ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಗ್ರಾ.ಪಂ ಅಧ್ಯಕ್ಷರಾದ ಮುನೇಯ ರವರು ಈ ರೀತಿ ದೌರ್ಜನ್ಯ ಮಾಡುತ್ತಿದ್ದಾರೆ.
ತೊರ‍್ನಹಳ್ಳಿ ಸರ್ವೆ ನಂಬರ್ 144, 145  ಮತ್ತು 197 ಇದರಲ್ಲಿ ಸುಮಾರು 188 ಎಕರೆ ಜಮೀನು ಇದೆ. ಇದರಲ್ಲಿ ಅನೇಕ ಭೂ ಕಳ್ಳರು ಹಾಗೂ ರಾಜಕೀಯ ವ್ಯಕ್ತಿಗಳು ಸುಮಾರು ಎಕರೆಗಳಷ್ಟು ಭೂ ಕಬಳಿಕೆಯನ್ನು ಮಾಡಿದ್ದಾರೆ ಆದರೆ ಇದನ್ನು ಯಾವ ಅಧಿಕಾರಿಗಳು ಪ್ರಶ್ನೆ ಮಾಡುತ್ತಿಲ್ಲ. ಸುಮ್ಮನೆ ಅಮಾಯಕರಾದ ಬೀದಿ ಬದಿ ವ್ಯಾಪಾರಸ್ಥರು ಅಂಗಡಿಗಳನ್ನ ಮತ್ತು ಹೋಟೆಲ್ ಗಳನ್ನು ನಡೆಸುತ್ತಿದ್ದರೆ ಅವರ ಮೇಲೆ ದರ್ಪ ತೋರುವ ಕೆಲಸ ಮಾಡುತ್ತಿದ್ದಾರೆ.ತೊರ‍್ನಹಳ್ಳಿ ಗ್ರಾಮದ ಮುನೇಯ ಎಂಬುವವರು ಇದೇ ಸರ್ವೆ ನಂಬರಲ್ಲಿ ಬೆಂಗಳೂರಿನವರಿಗೆ ಅಕ್ರಮವಾಗಿ ಲೇಔಟ್ ಮಾಡಲು ಪ್ರಯತ್ನಪಟ್ಟಿದ್ದು, ಅಕ್ರಮವಾಗಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಅವರ ಜೊತೆ ಶಾಮೀಲಾಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಸಿ.ವಿ.ವೆಂಕಟರಮಣಪ್ಪ ಎಂಬುವವರು ಇದೆ ಜಾತ್ರೆ ಜಮೀನಿಗೆ ಸಂಬಂಧಿಸಿದ ಸರ್ವೇ ನಂಬರ್ ಅಲ್ಲಿ ಅಕ್ರಮವಾಗಿ ಮೂರು ಅಂತಸ್ತಿನ ಮನೆ ಕಟ್ಟಿದ್ದು ಅದನ್ನ ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಇದನ್ನು ಪ್ರಶ್ನೆ ಮಾಡಿದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ, ಅರೆಸ್ಟ್ ಮಾಡಿಸುತ್ತೇವೆ ಎಂದು ಧಮ್ಕಿ ಹಾಕುತ್ತಾರೆ. ಪಾಪ ಕಷ್ಟಪಟ್ಟು ದುಡಿಯುವ ಇಂತಹ ಬೀದಿ ಬದಿಯ ಅಂಗಡಿ ಮತ್ತು ಹೋಟೆಲ್ ಮಾಲೀಕರ ಮೇಲೆ ದೌರ್ಜನ್ಯ ಮಾಡುವುದು ಖಂಡನೀಯವಾಗಿದ್ದು, ಎಷ್ಟು ಜನ ಭೂಕಬಳಿಕೆಯನ್ನು ಮಾಡಿಕೊಂಡಿದ್ದರೋ ಅವರನ್ನೆಲ್ಲ ತೆರವು ಮಾಡಿಸಿ ಕ್ರಿಮಿನಲ್ ಕೇಸ್ ಹಾಕಿಸಿ. ನಮಗೆ ಅಧಿಕಾರಿಗಳ ಕಡೆಯಿಂದ ನೋಟಿಸ್ ಬಂದ ತಕ್ಷಣ ಅವರು ತೆರವು ಮಾಡುವ ಅಗತ್ಯವಿಲ್ಲ ನಾವೇ ಜಾಗವನ್ನು ತೆರವು ಮಾಡುತ್ತೇವೆ. ಸುಖಾಸುಮ್ಮನೆ ಅಮಾಯಕ ಜನರಿಗೆ ತೊಂದರೆ ನೀಡುತ್ತಿದ್ದರೆ, ಮುಂದೆ ನಮ್ಮ ಸಂಘಟನೆ ವತಿಯಿಂದ ಈ ಬೀದಿಬದಿಯ ಅಂಗಡಿ ಮತ್ತು ಹೋಟೆಲ್ ಮಾಲೀಕರ ಪರವಾಗಿ ದೊಡ್ಡ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ಸಂದೇಶ್, ಹೋಟೆಲ್ ಮಾಲೀಕರಾದ ರವಿಚಂದ್ರ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!