
ಉದಯವಾಹಿನಿ ಚಿಂಚೋಳಿ: ತಾಲ್ಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯತನಲ್ಲಿ ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಎರಡನೇ ಅವಧಿಯ ಚುನಾವಣೆಗೆ ಅಧ್ಯಕ್ಷರಾಗಿ ಜಯಮ್ಮ ನರಸಪ್ಪಾ ಪೂಜಾರಿ,ಉಪಾಧ್ಯಕ್ಷರಾಗಿ ರಾಜಶೇಖರ ಅಣ್ಣೆಪ್ಪ ನಾಟೀಕಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಹಿರಿಯ ಮುಖಂಡ ಶಿವರಾಜ ಪಾಟೀಲ ಮಾತನಾಡಿ ಗ್ರಾಪಂ.ಸದಸ್ಯರ ಒಟ್ಟು ಬಲ 11 ಸದಸ್ಯರಿದ್ದು,8ಸದಸ್ಯರು ಹಾಜರಾಗಿದ್ದು ಸದಸ್ಯರ ಒಪ್ಪಿಗೆ ಮೇರೆಗೆ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿದ್ದು ಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ,ಯಾವುದೇ ಪಕ್ಷಬೇಧ ಎನ್ನದೆ ಗ್ರಾಮದ ಅಭಿವೃದ್ಧಿಗೆ ಹಗಲಿರುಳು ದುಡಿದು ಅಭಿವೃದ್ಧಿ ಪಡಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಗನ್ನಾಥ ಕಟ್ಟಿ,ಶಿವರಾಜ ಪಾಟೀಲ,ಬಕ್ಕಪ್ಪ ಪೂಜಾರಿ,ಸುರೇಶ ವೈದ್ಯರಾಜ,ಮೋಹನ್ ರಾಠೋಡ್,ಸೈಯದ್ ಜಾಕೀರಸಾಬ,ಸುರೇಶ ದೇಶಪಾಂಡೆ,ಖೂಬಾ ನಾಯಕ,ಮಾರುತಿ,ಸುವರ್ಣ ಜಗಪ್ಪ,ಮಂಜುಳಾ ಹಣಮಂತ ಕೊಡದೂರ,ಶಾಮಲತಾ ಚನ್ನಬಸವ,ಕಮಲಾಬಾಯಿ ಲಚ್ಚು,ನರಸಿಂಗ್ ದೇವಜೀ,ಅನೇಕರಿದ್ದರು.
