ಉದಯವಾಹಿನಿ, ಅಗರ್ತಲಾ: ಹಿಜಾಬ್ ಧರಿಸಿ ಶಾಲೆ ಪ್ರವೇಶಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಲಬಂಥೀಯ ಗುಂಪೊಂದು ತಡೆದಿದ್ದು, ತ್ರಿಪುರದಲ್ಲಿ ಕೂಡ ಹಿಜಾಬ್ ವಿವಾದ ಭುಗಿಲೆದ್ದಿದೆ.ಸೆಪಹಿಜಾಲ ಜಿಲ್ಲೆ ವಿಶಾಲ್‌ಘರ್ ವಿಭಾಗದ ಶಾಲೆಯೊಂದರ ಹೊರಗಡೆ ಶುಕ್ರವಾರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆ ಪ್ರವೇಶಿಸಲು ಮುಂದಾಗಿದ್ದಾರೆ. ಇದೇ ವೇಳೆ ಗುಂಪೊಂದು ಅವರನ್ನು ತಡೆದಿದ್ದು, ಹಿಜಾಬ್ ಬಿಚ್ಚಿಟ್ಟು ಶಾಲೆಗೆ ತೆರಳಬೇಕು ಎಂದಿದ್ದಾರೆ.ಇದೇ ಸಂದರ್ಭದಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಬಲಪಂಥೀಯ ಗುಂಪಿನ ಸದಸ್ಯರ ಕೃತ್ಯವನ್ನು ಖಂಡಿಸಿದ್ದಾನೆ. ಆಗ ಭಾರಿ ಗಲಾಟೆ ಶುರುವಾಗಿದೆ.ಬಲಪಂಥೀಯ ಗುಂಪಿನ ಕೃತ್ಯ ಖಂಡಿಸಿದ ೧೦ನೇ ತರಗತಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಯನ್ನು ಶಾಲೆಯ ಹೊರಗಿನಿಂದ ಹೊರಗೆ ಕರೆದುಕೊಂಡು ಬಂದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಲಪಂಥೀಯ ಸಂಘಟನೆ ವಿರುದ್ಧ ರಸ್ತೆ ತಡೆ ನಡೆಸಿ ಮುಸ್ಲಿಮರು ಪ್ರತಿಭಟನೆ ನಡೆಸಿ
ದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.
