
ಉದಯವಾಹಿನಿ ಹೊಸಕೋಟೆ :ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವ ಅಥವಾ ನಮ್ಮ ಬೆಳವಣಿಗೆಯನ್ನು ಉತ್ತುಂಗಕ್ಕೆ ಕೊ0ಡಯ್ಯುವ ಶಕ್ತಿ ಶಿಕ್ಷಕ ವೃತ್ತಿಯಿಂದ ಮಾತ್ರ ಸಾಧ್ಯ ಎಂದು ಎ0ಪಿಸಿಎಸ್‌ನ ಅಧ್ಯಕ್ಷ ಜಗದೀಶ್ ಹೇಳಿದರು. ತಾಲೂಕಿನ ಬೈಲನರಸಾಪುರ ಗ್ರಾಪಂ. ವ್ಯಾಪ್ತಿಯ ಗುಂಡ್ರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯ ಶಿಕ್ಷಕ ಎಂ.ಮುನಿಶಾಮಯ್ಯ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕರ್ತವ್ಯ ನಿಷ್ಠೆ ಹಾಗೂ ಸಮಯ ಪರಿಪಾಲನೆ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ತನ್ನಲ್ಲಿರುವ ಜ್ಞಾನದ ಗಂಗೆ ಹರಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರಜ್ಞಾವಂತರಾಗಿ ಬೆಳೆಸುವಲ್ಲಿ ಶಿಕ್ಷಕರು ಸಾಕಷ್ಟು ಶ್ರಮಿಸುತ್ತಾರೆ. ಇತರೆ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಸಮಾಜದಲ್ಲಿಅತ್ಯಂತ ಪವಿತ್ರವಾದುದು. ಮುಖ್ಯ ಶಿಕ್ಷಕ ಎಂ.ಮುನಿಶಾಮಯ್ಯಸದಾ ಹಸನ್ಮುಖಿ, ತಮ್ಮ ಸುದೀರ್ಘ ಸೇವಾವಧಿಯ ೧೯ ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೊಂದು ಶಾಲೆಗೆ ವರ್ಗವಾಗಿದ್ದು, ಇವರ ಸೇವಾನಿಷ್ಠೆ ಎಲ್ಲ ಶಿಕ್ಷಕರಿಗೂ ಮಾರ್ಗದರ್ಶನವಾಗಬೇಕು ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮುಖ್ಯ ಶಿಕ್ಷಕ ಎಂ.ಮುನಿಶಾಮಯ್ಯ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಅದನ್ನು ಮುಖ್ಯವಾಹಿನಿಗೆ ಪ್ರಸ್ತುತ ಪಡಿಸಿದಾಗ ಶಿಕ್ಷಕರ ಬದುಕು ಸಾರ್ಥಕತೆಗೆ ನಾಂದಿಯಾಗಲಿದೆ. ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವುದೆ ನಮ್ಮೆಲ್ಲರ ಗುರಿಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಶಿಕ್ಷಣ ಸಂಯೋಜಕ ರವಿಕುಮಾರ್, ಸಿಆರ್‌ಪಿಗಳಾದ ನಂದೀಶ್‌ಕುಮಾರ್, ರಮೇಶ್, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಜಣ್ಣ, ಮುಖ್ಯ ಶಿಕ್ಷಕ ವೆಂಕಟರಮಣಪ್ಪ, ಸಹಶಿಕ್ಷಕರಾದ ಗಂಗರಾಜು, ಸುಬ್ರಾಯಪ್ಪ, ತಿಮ್ಮರಾಯಪ್ಪ, ರಾಜು, ಬಾಲಾಜಿ, ಗೋಪಾಲಪ್ಪ, ಚನ್ನಕೇಶವ, ಅಕ್ಷರ ಫೌಂಡೇಶನ್ ಸಂಯೋಜಕ ಮಂಜುನಾಥ್, ಗ್ರಾಪಂನ ಸದಸ್ಯರಾದ ಕೆಂಪಮ್ಮ ರಾಮಕೃಷ್ಣಪ್ಪ, ಮಾಜಿ ಸದಸ್ಯ ಶಂಕರ್ ಇದ್ದರು.
