
ಉದಯವಾಹಿನಿ ಇಂಡಿ: ಇಂಡಿ ಪಟ್ಟಣದಲಿ ದಿನಾಂಕ 04/08/2023 ರಂದು ಇಂಡಿ ಉಪ ವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ ದಿನಾಚರಣೆ ಪೂರ್ವ ಭಾವಿ ಸಭೆ ನಡೆದಾಗ ಆ ಸಭೆಯಲ್ಲಿ ಉಪಸ್ಥಿತಿ ಇರುವ ಇಂಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಬಿ ಜೆ ಇಂಡಿಯವರು ಮಾತನಾಡಿ ದಲಿತ ಸಂಘಟನೆಗಳು ಮತ್ತು ದಲಿತರು ಸುಲಿಗೆ ಮಾಡುವವರು ಅಂತ ಅತಿ ಕೀಳು ಮಟ್ಟದಿಂದ ಮಾತನಾಡಿ ದಲಿತರನ್ನು ಅವಮಾನ ಮಾಡಿದಾರೆ.ಆದ ಕಾರಣ ವಿವಿಧ ದಲಿತ ಸಂಘಟನೆಗಳು ಮತ್ತು ದಲಿತರನ್ನ ಅತಿ ಕೀಳ ಮಟ್ಟದಿಂದ ಕಾಣುವ ಇಂತಹ ನಾಲಾಯಕ್ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವುದೇ ನಮ್ಮ ದೂರಾದೃಷ್ಟಕರ ಸಂಗತಿ ಮೇಲಾಧಿಕಾರಿಗಳು ಇಂತಹ ನಾಲಾಯಕ್ ಅಧಿಕಾರಿ ಮೇಲೆ ಎಸ್ಸಿ . ಎಸ್ಟಿ. ಎ. ಸಿ. ಟಿ. ಅಡಿಯಲ್ಲಿ ಕೇಸ್ ದಾಖಲಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಇಲಾಖೆಯಿಂದ ತೆಗೆದು ಹಾಕಬೇಕು.ಒಂದು ವೇಳೆ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಹೋದರೆ ವಿಜಯಪುರ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ಅರಬೇತ್ತೆಲೆ ಧರಣಿ ಸತ್ಯಾಗ್ರಹ ಮಾಡಲಾಗುವದು ಎಂದು ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಅ) ದ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಮೇಲಿನಮನಿ ಯವರು ಹೇಳಿದರು. ಈ ಸಂದರ್ಭದಲ್ಲಿ ಪರಸುರಾಮ ಬಾವಿಕಟ್ಟಿ. ಶಿವಾನಂದ ಹರಿಜನ. ಪರಶು ಉಕಲಿ ಶಶಿಕುಮಾರ ಹರಿಜನ.ಬಸು ಮಾಷಾಳ. ವಿಜಯಕುಮಾರ ನಡುವಿನಕೆರಿ.
ಭಾಗವಹಿಸಿದವರು ಹಾಗೂ ಉಪಸ್ಥಿತರಿದ್ದರು.
