
ಉದಯವಾಹಿನಿ ಚಿತ್ರದುರ್ಗ: ನಗರದ ಲಯನ್ಸ್ ಕ್ಲಬ್ ಪೋರ್ಟ್ ಚಿತ್ರದುರ್ಗ ವತಿಯಿಂದ ಶನಿವಾರ ಕೂಲಿ ಕಾರ್ಮಿಕ ಬಡ ಮಹಿಳೆಯರಿಗೆ ಆಹಾರದ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಿಟ್ಗಳನ್ನು ವಿತರಿಸಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷ ಪಿ.ನಾಗೇಂದ್ರಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮ ಕುರಿತು ಮಾತನಾಡಿದ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರಾದ ಆರ್.ಸತ್ಯಣ್ಣ ” ಬಡ ಕೂಲಿಕಾರ್ಮಿಕರನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಜೀವನ ನಡೆಸಲು ಹಾಗೂ ಹಸಿದವರ ಹೊಟ್ಟೆಗೆ ಅನ್ನವನ್ನು ನೀಡುವಂತಹ ಕಾರ್ಯ ಚಿತ್ರದುರ್ಗ ಲಯನ್ಸ್ ಕ್ಲಬ್ ವತಿಯಿಂದ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ ಎಂದು ಹೇಳಿದರು.ಕಾರ್ಯಕಾರಣಿ ಸದಸ್ಯರಾದ ಉದಯಶಂಕರ್,ಕೃಷ್ಣಮೂರ್ತಿ, ಮಂಜಣ್ಣ, ಸೋಮನಾಥ ಶೆಟ್ಟಿ, ಕೆ.ಮಲ್ಲಿಕಾರ್ಜುನ ಚಾರ್.ಕಾರ್ಮಿಕರಾದ ಮುಬೀನಾ ಮತ್ತು ಉಷಾರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
