ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಚಿಮ್ಮಾಇದಲಾಯಿ ಗ್ರಾಮ ಪಂಚಾಯತನ ಎರಡನೇ ಅವಧಿಗೆ ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೈಬಣ್ಣ ಹಣಮಂತ ದಸ್ತಾಪೂರ ಉಪಾಧ್ಯಕ್ಷೆರಾಗಿ ಜಗದೇವಿ ಮಲ್ಲಿಕಾರ್ಜುನ ಕೋಟಪಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಧನರಾಜ ಭೋಮ್ಮಾ ತಿಳಿಸಿದ್ದಾರೆ.
ಒಟ್ಟು 12ಸದಸ್ಯರ ಬಲವಿದ್ದು ಸರ್ವ ಸದಸ್ಯರು ಹಾಜರಾಗಿದ್ದು ಎಲ್ಲರ ಸಮ್ಮುಖದಲ್ಲೇ ಅಧ್ಯಕ್ಷರ ಉಪಾಧ್ಯಕ್ಷರ ಒಂದೊಂದು ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವಿರೋಧವಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪಿಡಿಒ ಮಾರುತಿ,ಮಾಜಿ ಅಧ್ಯಕ್ಷ ಸವಿತಾ ಶಿವಯೋಗಿ ರುಸ್ತಾಂಪುರ,ಮಾಜಿ ಉಪಾಧ್ಯಕ್ಷ ಶ್ರೀನಿವಾಸ,ಚಂದ್ರಕಲಾ ರಾಜೇಂದ್ರ,ಲಕ್ಷ್ಮಿ ಅಮೃತ,ರೇಣುಕಾ ಗುಂಡಪ್ಪ,ಮೋಗಲಪ್ಪ,ಉಮೇಶ,ಆನಂದ,ಇಮಾಮ್ ಪಟೇಲ,ಶೇಖಮ್ಮ ತಿಪ್ಪಣ್ಣ,ಮಹ್ಮುದ್ ಅಸಾದ್,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!