ಉದಯವಾಹಿನಿ ಯಾದಗಿರಿ: ಮಾದಿಗ ಸಮುದಾಯ ಒಗ್ಗಟ್ಟಾದರೆ ಮಾತ್ರ ನಮ್ಮ ಡಾ. ಏ.ಜೆ  ಸದಾಶಿವ ಆಯೋಗ ವರದಿ ಸಂಪೂರ್ಣ ಜಾರಿಗೆಯಾಗುತ್ತದೆ ಎಂದು ಕರ್ನಾಟಕ ಮಾದಿಗ ದಂಡೋರ ಎಂ.ಆರ್.ಪಿ.ಎಸ್ ಸಮಿತಿ ನರೇಂದ್ರ ಬಾಬು ಅವರು ಹೇಳಿದರು. ನಗರದ ಹಳೆ ಪ್ರವಾಸ ಮಂದಿರದಲ್ಲಿ ಬುಧವಾರ ನಡೆದ ಹಲೋ ಮಾದಿಗ ಚಲೋ ಹೈದರಾಬಾದ್  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕು ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದ ವರೆಗೂ ನಮ್ಮ ಸಂಘಟನೆ ಬಲಪಡಿಸಬೇಕು ಅಂದಾಗ ಸಮುದಾಯ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಮಾದಿಗ ಸಮುದಾಯಕ್ಕೆ ಮೀಸಲಾತಿ ಜನಸಂಖ್ಯೆ ಅನುಗುಣವಾಗಿ ಸಿಗುತ್ತಿಲ್ಲ ನಮಗೆ ಉನ್ನತ ಮಟ್ಟದಲ್ಲಿ ಉದೋಗ ಸಿಗುತ್ತಿಲ್ಲ. ಸಂವಿಧಾನ ನಮಗೆ ಎಲ್ಲಾ ರೀತಿಯ ಬದುಕಲು ಹಕ್ಕು ಇದ್ರೂ ಸಮಾಜಕ್ಕೆ ಸಮಾನವಾಗಿ ನ್ಯಾಯ ಸಿಗುತ್ತಿಲ್ಲ ಅನ್ನುವುದು ನಮಗೆ ತುಂಬಾ ನೋವು ಇದೆ. ಇಗಾಗಿ ನಮಗೆ ಹೋರಾಟ ಅನಿವಾರ್ಯವಾಗಿದೆ ಎಂದರು. ನಂತರ ಮಾತನಾಡಿದ ಸಮಾಜ ಮುಖಂಡ ವಿಜಯ ಶಿರಗೋಳ ಅವರು ನಮ್ಮ ಸಂಘಟನೆ ಸಮಾಜಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಬೇಕು ನಮ್ಮ ಹೊಟ್ಟೆ ತುಂಬಿಸಿಕೊಳ್ಳಲಿ ಸಂಘಟನೆ ಮಾಡಬಾರದು ನಾವು ಜಾಗೃತರಾಗಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲಿ ಮಾತನಾಡಿ ನಮ್ಮ ರಾಷ್ಟ್ರ ನಾಯಕ ಮಂದಕೃಷ್ಣ ಅಣ್ಣನವರು ನಮ್ಮ ಸಮಾಜಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಅವರಿಗೆ ನಾವು ಬೆಂಬಲವಾಗಿ ಇರಬೇಕು ಅಂದಾಗ ಮಾತ್ರ ಅವರಿಗೆ ಹೋರಾಟ ಮಾಡಲು ಒಂದು ಶಕ್ತಿ ತುಂಬಿದಂತೆಯಾಗುತ್ತದೆ ಎಂದು ಅವರು ಹೇಳಿದರು.
ಯಾದಗಿರಿ ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೇಗಣ್ಣಗೇರಾ ಮಾತನಾಡಿ ಇನ್ಮೂಂದೆ ಹೋಬಳಿ ಮತ್ತು ತಾಲ್ಲೂಕು ಮಟ್ಟದಿಂದ ಸಂಘಟನೆಯನ್ನು ಕಟ್ಟಿ ಇನ್ನಷ್ಟು  ಸಂಘಟನೆ ಬಲಪಡಿಸುತ್ತೆನೆ ಹತ್ತಿ ಶೀಘ್ರದಲ್ಲೇ ಹಲೋ ಮಾದಿಗ ಚಲೋ ಹೈದರಾಬಾದ್ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತದೆ ಆ ಕಾರ್ಯಕ್ರಮಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗವಹಿಸಿಲ್ಲಿದ್ದಾರೆ. ಸದಾಶಿವ ಆಯೋಗದ ವರದಿಯನ್ನು  ಈ ಕಾರ್ಯಕ್ರಮದಲ್ಲಿ  ಘೋಷಣೆ ಮಾಡಲ್ಲಿದ್ದಾರೆ  ಈ ಕಾರ್ಯಕ್ರಮಕ್ಕೆ ನಮ್ಮ ಯಾದಗಿರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯ ಭಾಂದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಜಯ ದಾಸನಕೇರಿ, ದೇವು ಲಿಂಗೇರಿ, ಚಂದ್ರು ಮುಂಡರಗಿ, ಮಲ್ಲು ಬೆಳಗೇರಾ, ರಾಜು ಕಡಚೂರ್, ಅನಿಲ ದಾಸನಕೇರಿ,  ಮಂಜು ದಾಸನಕೇರಿ, ಶಂಕರಗಂಗಾ ರಾಮಸಮುಂದ್ರ, ಗುರು ಪೋಲಿಸ್, ಶ್ಯಾಮು ಕಾಳಬೆಳಗುಂದಿ, ಉದಯ ಕುಮಾರ, ಕಿರಣ್, ಸೈದಪ್ಪ ತುಮಕೂರು, ರಾಕೇಶ ಹತ್ತಿಕುಣಿ, ಶರಣಪ್ಪ, ಅಶೋಕ ಮಾದ್ವಾರ, ಆನಂದ ಮಾದ್ವಾರ, ಪ್ರಭು ಗೋಡಿಯಾಳ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!