
ಉದಯವಾಹಿನಿ ದೇವದುರ್ಗ:-ತಾಲೂಕಿನಲ್ಲಿ ಬಹುದಿನಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಮತ್ತು ವಿವಿಧ ಚುನಾವಣೆಗಳಲ್ಲಿ ಸಕ್ರಿಯವಾಗಿ ಹಲವಾರು ವರ್ಷಗಳಿಂದ ಪಕ್ಷದ ನಿಷ್ಠಾವಂತ ಸಾಮನ್ಯ ಕಾರ್ಯಕರ್ತನಾಗಿ ದೇವದುರ್ಗ ಬ್ಲಾಕ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಸ್ತುತ ಯುವ ಸಮಿತಿಯ ತಾಲೂಕು ಸಂಚಾಲಕರಾಗಿ ಪಕ್ಷದ ಮುಖಂಡರು ವಹಿಸಿರುವ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿಕೊಂಡು ಎಲ್ಲರೊಂದಿಗೆ ಸರಳ ಸ್ವಭಾವದೊಂದಿಗೆ ಬೆರೆಯುವ ಮತ್ತು ಸವಿತಾ ಸಮಾಜದ ತಾಲೂಕ ಅಧ್ಯಕ್ಷರಾದ ಗೂಳಪ್ಪ ಹೇಮನೂರು ಇವರಿಗೆ ರಾಜ್ಯ ನಿಗಮ ಮಂಡಳಿಯ ನಾಮನಿರ್ದೇಶನ ಸದಸ್ಯರನ್ನಾಗಿ ಮಾಡಬೇಕೆಂದು ತಾಲೂಕ ಸವಿತಾ ಸಮಾಜದ ಮುಖಂಡ ರಮೇಶ ಹೇಮನೂರು ಮಾತನಾಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರುಗಳನ್ನು ಒತ್ತಾಯಿಸಿದ್ದಾರೆ ,
ಅವರು ಶನಿವಾರದಂದು ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸವಿತಾ ಸಮಾಜದ ಮುಖಂಡ ರಮೇಶ್ ಹೇಮನೂರ ಮಾತನಾಡಿ ತಾಲೂಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ನಮ್ಮ ಸಮಾಜವು ಕಾಂಗ್ರೆಸ್ ಪಕ್ಷವನ್ನು ಅತಿಹೆಚ್ಚಿನ ರೀತಿಯಲ್ಲಿ ಬೆಂಬಲಿಸಿದ್ದು ಹಾಗೂ ರಾಜಕೀಯವಾಗಿ ಉತ್ತಮವಾದ ಸ್ಥಾನಮಾನಗಳನ್ನು ಪಡೆಯುವಲ್ಲಿ ನಮ್ಮ ಸಮಾಜ ಬಹಳಷ್ಟು ಹಿಂದುಳಿದಿದ್ದು ಹಾಗಾಗಿ ಹಿಂದುಳಿದ ಅಣೆಪಟ್ಟಿಯನ್ನು ಹೊತ್ತಿರುವ ನಮ್ಮ ದೇವದುರ್ಗ ತಾಲೂಕಿನ ಹಿಂದುಳಿದ ಸಮಾಜ ವಾಗಿರುವ ನಮ್ಮ ಸವಿತಾ ಸಮಾಜದ ತಾಲೂಕ ಅಧ್ಯಕ್ಷರಿಗೆ ನಿಗಮ ಮಂಡಳಿಯ ಸೂಕ್ತ ಸ್ಥಾನಮಾನ ನೀಡಿ ಸಮಾಜಕ್ಕೆ ಉತ್ತಮವಾದ ರಾಜಕೀಯ ನ್ಯಾಯ ಒದಗಿಸಿ ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು,
ಈ ಸಂದರ್ಭದಲ್ಲಿ :- ಸಮಾಜದ ಜಿಲ್ಲಾ ಉಪಾಧ್ಯಕ್ಷ ಅಯ್ಯಪ್ಪ, ಮೌನೇಶ ತಿಂಥಣಿ ಬ್ರೀಜ್,ಶಿವಕುಮಾರಸುಂಕೇಶ್ವರಹಾಳ, ಆಂಜನೇಯ, ನಾಗರಾಜ ಹೀರೆರಾಯಕುಂಪಿ, ವೆಂಕಟೇಶ ಮಾಸ್ತರ ಉಪಸ್ಥಿತರಿದ್ದರು,
