
ಉದಯವಾಹಿನಿ ಮಾಲೂರು: ಸಾಕ್ಷರತಾ ಪರೀಕ್ಷೆಯನ್ನು ಪರಿಶೀಲಿಸಿದ ಅಧಿಕಾರಿಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಎಮ್‍ಸಿಹಳ್ಳಿ ಶಾಲೆಯಲ್ಲಿ ನಡೆಯುತ್ತಿದ್ದ ಸಾಕ್ಷರತಾ ಪರೀಕ್ಷೆಯನ್ನು ಮಾಲೂರು ತಾಲೂಕಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರೀಕ್ಷೆಯನ್ನು ಪರಿಶೀಲನೆ ಮಾಡಿದರು.ಸಾಕ್ಷರತಾ ಪರೀಕ್ಷೆಗೆ ಸಂಬಂಧಿಸಿದಂತೆ ಅಗತ್ಯವಾದ ಮಾರ್ಗದರ್ಶನವನ್ನು ಅಧಿಕಾರಿಗಳು ನೀಡಿದರು. ಎಲ್ಲರೂ ಅಕ್ಷರ ಜ್ಞಾನವನ್ನು ಪಡೆದುಕೊಳ್ಳುವುದು ಈ ಪರೀಕ್ಷೆಯ ಉದ್ದೇಶವಾಗಿದೆ ಎಂದು ಕೋಲಾರ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ತಿಳಿಸಿದ್ದಾರೆ.ಮಹಿಳೆಯರು ಓದು, ಬರಹ ಕಲಿಯಬೇಕು ತಾವೇ ಸಹಿ ಮಾಡುವ ಕೆಲಸ ಆಗಬೇಕಿದೆ, ಮಹಿಳಾ ಸಂಘಗಳು, ಬ್ಯಾಂಕ್ ಸೇರಿದಂತೆ ಇತರ ಕಡೆಗಳಲ್ಲಿ ತಾವೇ ಓದಿ ಸಹಿ ಮಾಡುವುದು ಸೇರಿದಂತೆ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಈಗಾಗಲೆ ಮೂರು ಹಂತಗಳಲ್ಲಿ ಸಾಕ್ಷಾರತಾ ಪರೀಕ್ಷೆ ನಡೆದಿದೆ. ಬೆಳಿಗ್ಗೆ, ಮದ್ಯಾಹ್ನ, ಸಂಜೆ ಪರೀಕ್ಷೆ ನಡೆದಿದೆ ಎಂದರು.
*ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ಪರಿಶೀಲಿಲನೆ*
ಸಾಕ್ಷರತಾ ಪರೀಕ್ಷೆ ಹಿನ್ನೆಲೆಯಲ್ಲಿ ಮಾಲೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾರವರು ಎಂ.ಸಿ.ಹಳ್ಳಿ ಕ್ಲಸ್ಟರ್ ಸೇರಿದಂತೆ ತೊರ‍್ನಹಳ್ಳಿ ಗ್ರಾಮ ಮತ್ತು ಮಡಿವಾಳ ಗ್ರಾಮಗಳ ಶಾಲೆಗಳಿಗೆ ಭೇಟಿನೀಡಿ ಸಾಕ್ಷರತಾ ಪರೀಕ್ಷೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೋಲಾರ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿ ಆರ್ ರಾಜಪ್ಪ, ಎಂ.ಸಿ.ಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಜಲಜಾಕ್ಷಿ ಹಾಗೂ ಗ್ರಾಮಸ್ಥರು ಇದ್ದರು.
