ಉದಯವಾಹಿನಿ,ಕಾರಟಗಿ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್.ಕಾಂತರಾಜು ನೇತ್ರತ್ವದ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಿಂದ ಎಲ್ಲಾ ಸಮೂದಾಯಕ್ಕೂ ಸೂಕ್ತ ನ್ಯಾಯ ದೊರಕಲಿದೆ ಎಂದು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಪದ್ಮಶ್ರೀ ಕನ್ವೇನ್ಷನ್ ಹಾಲ್ ನಲ್ಲಿ ರವಿವಾರ ನಡೆದ ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ಸಿದ್ಧರಾಮಯ್ಯ ನವರ ಆಡಲಿತಾವಧಿಯಲ್ಲಿ ಜಾತಿಗಣತಿಯನ್ನು ಮಾಡಿಸಿದ್ದರಲ್ಲದೆ ವರದಿ ಕೂಡ ಸಿದ್ಧವಾಗಿತ್ತು. ರಾಜಕೀಯ ಕಾರಣಗಳಿಗಾಗಿ ಈ ಹಿಂದೆ ಅಧಿಕಾರಕ್ಕೆ ಬಂದ ಸರಕಾರಗಳು ವರದಿ ಸ್ವೀಕಾರ ಮಾಡಲಿಲ್ಲಾ. ವರದಿ ಅನುಷ್ಠಾನದಿಂದ ಜಾತಿಗಳ ಸ್ಥಿತಿಗತಿ ಆಧರಿಸಿ ಶಿಕ್ಷಣ ಉದ್ಯೋಗ ಸೇರಿ ನಾನಾ ವಲಯಗಳಲ್ಲಿ ಅವಕಾಶ ಮತ್ತು ಸೌಲಭ್ಯಸಿಗಲಿದೆ ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕುವ ಜತೆಗೆ ಪ್ರತಿಯೊಂದು ಸಣ್ಣ ಸಮೂದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗುತ್ತದೆ ಎಂದರು.
ಅಲ್ಲದೆ ಬಣಜಿಗ ಸಮಾಜ ರಾಜಕೀಯವಾಗಿ ಎಳು ಮುಖ್ಯಮಂತ್ರಿಗಳನ್ನ ನಾಡಿಗೆ ನೀಡಿ ರಾಜಕೀಯ ಮತ್ತು ಸಾಮಾಜೀಕ ಸೇವೆಯಲ್ಲೂ ತೊಡಗಿಸಿಕೊಂಡಿರುವುದು ಈ ಸಮಾಜದ ಮತ್ತೊಂದು ವೈಶಿಷ್ಟತೆಯಾಗಿದೆ. ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಭವಿಷ್ಯದ ಪ್ರಗತಿಗೆ ಇಗಲೇ ಪ್ರೋತ್ಸಾಹ ನೀಡುತ್ತಿರುವುದು ಸಮಾಜದ ಅನುಕರಣಾ ಶೀಲ ನಡೆಯಾಗಿದೆ ಎಂದು ಸಮಾಜದ ಕಾರ್ಯವನ್ನು ಶ್ಲಾಘಿಸಿದರು. ಸಮೂದಾಯದ ಕಾರ್ಯಕ್ರಮ ಮಾಡಲು ಪುರಸಭೆ ವತಿಯಿಂದ ನಿವೇಶನ ಕೊಡಿಸಿ ಸಮೂಧಾಯ ಭವನ ನಿರ್ಮಾಣ ಮಾಡಲು ೧ ಕೋಟಿ ಅನುದಾನ ಒದಗಿಸಲಾಗುವುದು ಎಂದು ಭರವಸೇನೀಡಿದರು. ಇದಕ್ಕೂ ಮುಂಚೆ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. ೮೫% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಾದಾಮಿ ತಾಲೂಕಾ ಘಟಕದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ|| ಅವಿನಾಶ ಮಮದಾಪೂರ ಹಾಗೂ ಸಹಾಯಕ ಪ್ರಾಧ್ಯಾಕರಾದ ಸಂಗೀತಾ ಪಟ್ಟಣಶೇಟ್ಟಿ ಬಾದಾಮಿ ಇವರಿಂದ ವಿಶೇಷ ಉಪನ್ಯಾಸ ನಡೆಯಿತು. ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣಜಿಗ ಸಮಾಜದ ತಾಲೂಕಾಧ್ಯಕ್ಷ ವೀರೇಶಪ್ಪ ಚಿನಿವಾಲವಹಿಸಿದ್ದರು. ಶರಣಪ್ಪ ಗದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. . ಶಿಕ್ಷಕ ಚನ್ನಪ್ಪ ಕಂಚಿ, ಮೇಘಾ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ವಿವಿಧಘಟಕದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮಹಿಳೆಯರು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!