ಉದಯವಾಹಿನಿ ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಅತ್ಯಾಧುನಿಕ ಸೌಲಭ್ಯಗಳ ಸುಸಜ್ಜಿತ ಬಡಾವಣೆಗಳ ನಿಮಾಣ ಸ್ವಾಗತಾರ್ಹ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಹೊರವಲಯದ ಸಾದುಗೋನಹಳ್ಳಿಯ ಬಳಿ ನಿರ್ಮಾಣಗೊಂಡಿರುವ ಅನ್ನಪೂರ್ಣೇಶ್ವರಿ ಬಡಾವಣೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆ.ಆರ್.ಪೇಟೆ ಪಟ್ಟಣದಲ್ಲಿ ಸುಭಾಷ್‌ನಗರ, ಹೇಮಾವತಿ ಬಡಾವಣೆ, ಜಯನಗರ, ಬಸವೇಶ್ವರ ನಗರ ಮುಂತಾದ ಹಲವು ಬಡಾವಣೆಗಳಿದ್ದರೂ ಅವೆಲ್ಲವೂ ಪೂರ್ವ ಯೋಜನೆಯಿಲ್ಲದೆ ರೆವಿನ್ಯೂ ನಿವೇಶನಗಳಾಗಿದ್ದು ಯೋಜಿತ ರೀತಿಯಲ್ಲಿ ಪಟ್ಟಣ ಬೆಳವಣಿಗೆಯಾಗಿಲ್ಲ. ಇದರ ಪರಿಣಾಮ ಕಿರಿದಾದ ರಸ್ತೆಗಳು ಸೇರಿದಂತೆ ಹತ್ತಾರು ನಾಗರೀಕ ಸಮಸ್ಯೆಗಳು ಎದುರಾಗಿವೆ. ಬೆಂಗಳೂರು, ಮೈಸೂರಿನಂತಹ ಬೃಹತ್ ನಗರಗಳ ಮಾದರಿಯಲ್ಲಿ ಎಲ್ಲಾ ನಾಗರೀಕ ಸೌಲಭ್ಯಗಳನ್ನು ಒಳಗೊಂಡAತೆ ಅನ್ನಪೂಣೇಶ್ವರಿ ಪ್ರಾಜೆಕ್ಟ÷್ಸನವರು ನಮ್ಮ ಪಟ್ಟಣದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಿ ಕಡಿಮೆ ಬೆಲೆಗೆ ವಿತರಿಸುತ್ತಿದ್ದಾರೆ. ಬಡಾವಣೆಗೆ ಡಿಟಿಸಿಪಿ ಮತ್ತು ರೇರಾ ಅನುಮೋದನೆ ದೊರಕಿದೆ. ಎಸ್.ಬಿ.ಐ ಮತ್ತು ಕರ್ನಾಟಕ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಾವಣೆಗೆ ಅಗತ್ಯವಾದ ಉತ್ತಮರಸ್ತೆ, ವಿದ್ಯುತ್, ಒಳಚರಂಡಿ, ಕುಡಿಯುವ ನೀರಿನ ಸೌಲಭ್ಯಗಳಲ್ಲದೆ ಉದ್ಯಾನವನ, ದೇವಾಲಯ ಮತ್ತು ಹೈಟೆಕ್ ಶಾಲೆ ನಿರ್ಮಾಣಕ್ಕೂ ಯೋಜಿಸಿರುವುದು ಶ್ಲಾಘನೀಯ ಎಂದ ಶಾಸಕ ಹೆಚ್.ಟಿ.ಮಂಜು ವಾಣಿಜ್ಯ ಪರಿಕಲ್ಪನೆಯಿಲ್ಲದೆ ಗ್ರಾಹಕರ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಉದ್ಯಮಿಗಳಿಗೆ ತಾವು ಸಹಕಾರ ನೀಡುವುದಾಗಿ ತಿಳಿಸಿದರು.
ಅನ್ನಪೂಣೇಶ್ವರಿ ಪ್ರಾಜೆಕ್ಟ್÷್ಸ ವತಿಯಿಂದ ಶಾಸಕ ಹೆಚ್.ಟಿ.ಮಂಜು ಅವರನ್ನು ಗೌರವಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ, ಉದ್ಯಮಿ ಮೋಹನ್‌ಗೌಡ, ಪ್ರಾಜೆಕ್ಟ್ ನಿರ್ಮಾಪಕ ರಮೇಶ್, ಜೆಡಿಎಸ್ ಮುಖಂಡ ಬಿ.ಎಂ.ಕಿರಣ್, ವಕೀಲ ಮಹೇಶ್, ತಾಲ್ಲೂಕು ಸರ್ಕಾರಿ ನೌಕರರ ಹಿರಿಯ ಉಪಾದ್ಯಕ್ಷ ಎಸ್.ಆರ್.ಆನಂದ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿದ್ದು ಮಾತನಾಡಿದರು.
