ಉದಯವಾಹಿನಿ, ದೇವರಹಿಪ್ಪರಗಿ: ತಾಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರದಂದು ನೂತನವಾಗಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶ್ರೀಮತಿ ಸತ್ಯವ್ವ ಪರಶುರಾಮ ದೊಡಮನಿಯವರು ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ನಾನು ಹೆಚ್ಚಿನ ಶ್ರಮ ವಹಿಸಿ ತಾಲೂಕಿನಲ್ಲಿಯೇ ನಮ್ಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಶಾಪೂರ ಮಾತನಾಡಿ ನಿಮ್ಮ ಊರಿನ ಪಂಚಾಯಿತಿಯಲ್ಲಿ ಬರುವ ಯಾವುದೇ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಅಧ್ಯಕ್ಷರ ಸಮ್ಮುಖದಲ್ಲಿ ಮಾಡೋಣ ಎಂದರು. ಈ ಒಂದು ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ವಿತರಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ  ಸಂಗೀತಾ ಪಾಟೀಲ,ಸಾಬವ್ವ ಬಿರಾದಾರ, ಸವಿತಾ ಗುಡಿಸಲಮನಿ, ಪ್ರಿಯಾಂಕಾ ಚಿಗರಿ, ಪರಶುರಾಮ ಬುಯ್ಯಾರ, ಯಮನಪ್ಪ ಬೋವಿ, ರವಿಕುಮಾರ ಪೂಜಾರಿ, ಊರಿನ ಗಣ್ಯರಾದ ಬಾಬುಗೌಡ ಬಿರಾದಾರ,  ರೇವಣಸಿದ್ದನಗೌಡ ಬಿರಾದಾರ, ಎಸ್ ಎಸ್ ಮಾಣಸುಣಗಿ, ಬಸವರಾಜ ಲಿಂಗದಳ್ಳಿ, ಪ್ರಕಾಶ ಕೆಳಗಿನಮನಿ, ಶಿವನಗೌಡ ಬಿರಾದಾರ, ವಿಠೋಬಾ ನಾಟೀಕಾರ, ಪರಶುರಾಮ ದೊಡಮನಿ, ಬೀಮರಾಯ ಚಿಗರಿ,ಅಶೋಕ ಗುಡಿಸಲಮನಿ, ಗುರುನಾಥ ಬುಯ್ಯಾರ,  ಮಹೇಶ ಗದ್ದಗಿ, ರವಿ ನಾಯ್ಕೋಡಿ, ದಾನೇಶ ಕಲಕೇರಿ, ಸಿದ್ದಮ್ಮ ದೊಡಮನಿ, ಪ್ರಕಾಶ ಪಡಶೆಟ್ಟಿ, ಪಂಚಾಯಿತಿ ಸಿಬ್ಬಂದಿಗಳಾದ ಮುಜಾವಾರ ಕಾಂತು ರಾಠೋಡ, ಮಲ್ಲಮ್ಮ ಸಜ್ಜನ, ಮಂಜು ಮುರಡಿ, ದೇವೇಂದ್ರ ಲಾಯದಗುಂದಿ, ಸಿದ್ರಾಮ ವಾಲಿಕಾರ ಹಾಗೂ ಎಲ್ಲಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!