
ಉದಯವಾಹಿನಿ, ನಾಗಮಂಗಲ :ದೇವಲಾಪುರ ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗಳು ಹಾಗೂ ಹಾಲಿ ಶಾಸಕರು ಅಶ್ವಥ್ ನಾರಾಯಣ ರವರು ನಾಗಮಂಗಲಕ್ಕೆ ಆಗಮಿಸಿದ ಸಂದರ್ಭದಲ್ಲಿ ಫೈಟರ್ ರವಿ ಅವರು ಸ್ವಾಗತಿಸಿದರು. ಅವರು ತಾಲೂಕಿನ ದೇವಲಾಪುರ ಹೋಬಳಿ ತೂಬಿನಕೆರೆ ಗ್ರಾಮದ ಶ್ರೀ ಪಟ್ಟಲದಮ್ಮ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಾಗಮಂಗಲ ಕ್ಷೇತ್ರದ ಸಮಾಜ ಸೇವಕರಾದ ಮಲ್ಲಿಕಾರ್ಜುನ್ (ಫೈಟರ್ ರವಿ ) ರವರು ಸೌಹಾರ್ದಾಯುತವಾಗಿ ಭೇಟಿಯಾದರು. ಡಾ. ಅಶ್ವಥ್ ನಾರಾಯಣ್ ರವರು ಫೈಟರ್ ರವಿಯವರ ಜೊತೆ ದೇವಲಾಪುರ ಹೋಬಳಿಯ ತೂಬಿನಕೆರೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನಕ್ಕೆ ಭೇಟಿನೀಡಿ ಪೂಜೆಸಲ್ಲಿಸಿ, ದೇವತಾ ಕಾರ್ಯಕ್ರಮಕ್ಕೆ ಪಾಲ್ಗೊಂಡರು, ಫೈಟರ್ ರವಿರವರ ಸಮಾಜ ಸೇವಾ ಅಭಿವೃದ್ಧಿ ಕಾರ್ಯಕ್ಕೆ ಮುಚ್ಚುಗೆಯನ್ನು ಅಶ್ವಥ್ ನಾರಾಯಣ ರವರು ಗ್ರಾಮಸ್ಥರೊಂದಿಗೆ ವ್ಯಕ್ತಪಡಿಸಿದರು.
