ಉದಯವಾಹಿನಿ, ಸಿಂಧನೂರು: ಲಾಲ್ ಸಲಾಮ್ ಜನಕವಿಗೆ! ಲಾಲ್ ಸಲಾಮ್ ಜನದನಿಗೆ! ಲಾಲ್ ಸಲಾಮ್ ಅಮರಜೀವಿಗೆ! ಲಾಲ್ ಸಲಾಮ್ ಮೃತ್ಯಂಜಯಗೆ! ಕಾಮ್ರೇಡ್ ಗದ್ದರ್ ಅಮರ್ ರಹೇ…!ಹಾಡಿಗೆ ಆಕ್ಸಿಜನ್ ಆಗಿದ್ದ. ಹೋರಾಟಕ್ಕೆ ಡೈರೆಕ್ಷನ್ ನೀಡಿದ್ದ. ಶ್ರಮಶಕ್ತಿಯ ವಿಮೋಚನಾ ಆಂದೋಲನಕ್ಕೆ ಸಾಹಿತ್ಯ ಸಂಗೀತದ ವಿರಾಟ ರೂಪ ನೀಡಿದ, ತೆಲುಗು ಸಾಂಸ್ಕೃತಿಕ ಸೇನಾನಿ ಗದ್ದರ ( ಗುಮ್ಮಡಿ ವಿಠ್ಠಲರಾವ್) ನಮ್ಮನ್ನಗಲಿದ್ದಾರೆ. ದುಖ:ತಪ್ತ ಅಂತಿಮ ವಿದಾಯನ್ನು ಕ್ರಾಂತಿಕಾರಿ ರಾಜ್ಯ ಸಂಯೋಜಕರು ಎಂ ಗಂಗಾಧರ್ ಅವರ ತಿಳಿಸಿದರುನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ಕರೆದು ಮಾತನಾಡಿದ ಅವರು ಜನ ನಾಟ್ಯ ಮಂಡಳಿ ಎಂಬ ಬಹು ದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿ, ಮೂರು ದಶಕಗಳ ಕಾಲ ರೈತ, ಆದಿವಾಸಿ ವಿದ್ಯಾರ್ಥಿಗಳ ಕ್ರಾಂತಿಕಾರಿ ಸಂಘರ್ಷದ ಕಲಾ ರಾಯಭಾರಿಯಾಗಿ ಮೊಳಗಿದ ಧ್ವನಿ ಕಾಮ್ರೇಡ್ ಗದ್ದರ್.ಮಾರ್ಕ್ಸವಾದಿ-ಲೆನಿನ್ ವಾದಿ ಕ್ರಾಂತಿಕಾರಿ ರಾಜಕೀಯ ಶಿಕ್ಷಣ ಬಿತ್ತರಿಸಲು ಕೈಕೋಲು, ಕೆಂಭಾವುಟ, ಬರಿಮೈ, ಕಾಲ್ಗೆಜ್ಜೆ ತೊಟ್ಟು ಧಣಿವರೆಯದೆ ದುಡಿದ ಜಾಗೃತ ದನಿ ಗದ್ದರ್.ಪ್ರಜಾಗಾಯಕ ಎಂದೇ ಖ್ಯಾತರಾಗಿದ್ದ ಗದ್ದರ್ (74) ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೃದಯರೋಗದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಾಣಿಕ್ಯ ಕಾಮ್ರೇಡ್ ಗದ್ದರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ-RCF ವತಿಯಿಂದ : ಮೃತ್ಯುಂಜಯಗೆ ಲಾಲ್ ಸಲಾಮ್ ! ಎಂಬ ಹೆಸರಿನೊಂದಿಗೆ ಕ್ರಾಂತಿಕಾರಿ ಹಾಡುಗಳ ಕಾರ್ಯಕ್ರಮವನ್ನು ದಿನಾಂಕ : 11.08.2023 ರಂದು ಶುಕ್ರವಾರ ಸಿಂಧನೂರು ನಗರದಲ್ಲಿ ಆಯೋಜಿಸಲಾಗಿದೆ. ಸ್ಥಳವನ್ನು ನಂತರದಲ್ಲಿ ಖಚಿತಪಡಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಎಡಶಕ್ತಿಗಳು, ಕ್ರಾಂತಿಕಾರಿ ಹಾಡುಗಾರರು, ದಲಿತ ಕಲಾಮಂಡಳಿಯವರು, ಬಂಡಾಯ ಹಾಡುಗಾರರು, ಜನ ಕಲಾವಿದರು, ಸಾಹಿತಿಗಳು, ಕವಿಗಳು ಹಾಗೂ ಎಲ್ಲಾ ಬಗೆಯ ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ-ಯುವಜನ, ಮಹಿಳಾ ಮತ್ತು ಜನಪರ ಚಳುವಳಿಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಬೇಕು ಎಂದು ಮನವಿ ಮಾಡಿದರು. ಈ .ಸಂ.ಮೌನೇಶ ಜಾಲವಾಡ್ಗಿ, ಅಶೋಕ ಜಾಲವಾಡ್ಗಿ, ಹನುಮಂತಪ್ಪ ಗೊಡ್ಯಾಳ, ಮಾಬುಸಾಬ ಬೆಳ್ಳಟ್ಟಿ ಸೇರಿದಂತೆ . ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!