ಉದಯವಾಹಿನಿ, ಸೂರತ್ : ಸೂರತ್‌ನಲ್ಲಿರುವ ದತ್ತಿ ಸಂಸ್ಥೆಯೊಂದು ಅಯೋಧ್ಯೆಯ ರಾಮಮಂದಿರದ ಸುಂದರವಾದ ಪ್ರತಿಕೃತಿ ಮಾದರಿಗಳನ್ನು ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅದನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ನೀಡಲು ಯೋಜಿಸಲಾಗಿದೆ.
ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಮೀಸಲಾಗಿರುವ ಸಂಸ್ಥೆಯಾದ ಹ್ಯಾನ್ಸ್ ಆರ್ಟ್, ಭಾರತೀಯ ಬಹುಕಾಲದ ಕನಸಾದ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಹಾಯ, ಸಹಕಾರ ,ದೃಷ್ಟಿಕೋನಕ್ಕೆ ತನ್ನ ಬೆಂಬಲವನ್ನು ಪ್ರದರ್ಶಿಸಲು ಈ ಕ್ರಮವನ್ನು ಕೈಗೊಂಡಿದೆ. ಹ್ಯಾನ್ಸ್ ಆರ್ಟ್‌ನ ಪರೇಶ್ ಪಟೇಲ್ ಈ ವಿಶಿಷ್ಟ ಕಾರ್ಯದ ಹಿಂದೆ ಇರುವ ಸ್ಫೂರ್ತಿಯನ್ನು ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ಕನಸನ್ನು ನನಸು ಮಾಡುವಲ್ಲಿ ಪ್ರಧಾನಿ ಮೋದಿಯವರ ಸಮರ್ಪಣೆ ಮತ್ತು ಸಂಕಲ್ಪವನ್ನು ಅವರು ಶ್ಲಾಘಿಸಿ ‘ಪ್ರಧಾನಿ ಮೋದಿಯವರು ರಾಮಮಂದಿರದ ಕನಸನ್ನು ನನಸು ಮಾಡಿದರು’ ಎಂದು ಪಟೇಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!