ಉದಯವಾಹಿನಿ,
ರಿಯಾದ್: ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ನಿರಂತರ ಅಪರಾಧಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಆಗ್ರಹಿಸಿದೆ.
ರವಿವಾರ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸೇನೆಯ ಗುಂಡೇಟಿಗೆ ಮೂವರು ಫೆಲೆಸ್ತೀನೀಯರು ಬಲಿಯಾಗಿರುವ ಘಟನೆಯನ್ನು ಖಂಡಿಸಿರುವ ಐಒಸಿ ‘ಫೆಲೆಸ್ತೀನಿಯನ್ ಪ್ರಜೆಗಳು, ಅವರ ಭೂಮಿ ಮತ್ತು ಆಸ್ತಿಯ ವಿರುದ್ಧ ಉಗ್ರಗಾಮಿ ಇಸ್ರೇಲಿ ವಸಾಹತು ಗ್ಯಾಂಗ್‌ಗಳು ನಡೆಸುತ್ತಿರುವ ಸಂಘಟಿತ ಭಯೋತ್ಪಾದನೆಯ ಉಲ್ಬಣವು ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗಿದೆ. ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶದಲ್ಲಿ ಇಸ್ರೇಲ್‌ನ ನಿರಂತರ ಅಪರಾಧಗಳನ್ನು ನಿಲ್ಲಿಸಲು, ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಫೆಲೆಸ್ತೀನಿಯನ್ ಜನರಿಗೆ ರಕ್ಷಣೆಯನ್ನು ಒದಗಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿದೆ.
