ಉದಯವಾಹಿನಿ, ನವದೆಹಲಿ: ಸಾರ್ವಜನಿಕ ಆಕ್ರೋಶ ನ್ಯಾಯಾಂಗ ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಪೀಠವೂ ಅಭಿಪ್ರಾಯ ಪಟ್ಟಿದೆ. ಬಿಲ್ಕಿಸ್ ಬಾನು ಮೇಲೆ ೨೦೦೨ರ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಅವರ ಕುಟುಂಬದ ಏಳು ಮಂದಿ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದ ಎಲ್ಲ ೧೧ ಮಂದಿ ಆರೋಪಿಗಳ ಶಿಕ್ಷೆ ಇಳಿಸಿ ಜೈಲಿನಿಂದ ಬಿಡುಗಡೆ ಮಾಡಿರುವ ಕ್ರಮದ ಕಾನೂನು ಬದ್ಧತೆಯನ್ನು ಪರಾಮರ್ಶಿಸುವ ಪ್ರಕ್ರಿಯೆಯನ್ನು ಆರಂಭಿಸಿದ ವೇಳೆ ಸುಪ್ರೀಂ ಕೋರ್ಟ್ ಈ ರೀತಿಯ ಅಭಿಪ್ರಾಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠ, ಪ್ರತಿಭಟನೆಗಳು ಮತ್ತು ಆಕ್ರೋಶ ನಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರುವುದಿಲ್ಲ. ಕೇವಲ ಕಾನೂನು ಪ್ರಕಾರವಷ್ಟೇ ನಿರ್ಧರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸಾರ್ವಜನಿಕ ಆಕ್ರೋಶಗಳು ನಮ್ಮ ನ್ಯಾಯಾಂಗ ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ. ಕೇವಲ ಕಾನೂನಾತ್ಮಕ ಹೇಳಿಕೆಗಳನ್ನಷ್ಟೇ ನಾವು ಪರಿಗಣಿಸುತ್ತೇವೆ. ಸಾರ್ವಜನಿಕ ಆಕ್ರೋಶದ ಹಿನ್ನೆಲೆಯನ್ನು ಪರಿಗಣಿಸುವುದಿಲ್ಲ. ಎಂಬ ವಾದವನ್ನು ವಕೀಲರು ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!