ಉದಯವಾಹಿನಿ, ಜಾಲಹಳ್ಳಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ಸೇರಿದಂತೆ ವಿವಿಧ ಬೇಡಿಕೆಗಳು ಹಿಡೇರಿಸುವಂತೆ ಆಗ್ರಹಿಸಿ ಡಿವೈಎಫ್ಐ ಸಂಘಟನೆ ಗುರುವಾರ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಧರಣಿ ನಡೆಸಿದರು.ರಾಜು ನಾಯಕ ಮಾತನಾಡಿ ಕಳೆದ ಅನೇಕ ಭಾರಿ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನ ನೇಮಿಸುವಂತೆ ಮನವಿ ನೀಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂದು ತಾಲೂಕ ಮತ್ತು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಶುದ್ದ ಕುಡಿಯುವ ನೀರಿಲ್ಲ, ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಶೌಚಾಯಲಗಳು ಗಬ್ಬೂ ನಾರುತ್ತಿವೆ, ಯಾವೊಬ್ಬ ಸಿಬ್ಬಂದಿ ಸಮವಸ್ತ್ರ ಧರಿಸಲ್ಲ ಈ ಬಗ್ಗೆ ಅಧಿಕಾರಿಳು ಗಮನ ಹರಿಸಬೇಕೆಂದರು. ಇಂದು ಹೋರಾಟ ಅಮ್ಮಿಕೊಂಡಿರುವ ಭಾಗವಾಗಿ ಮುಖ ನೋಡದಂತಹ ಸಿಬ್ಬಂದಿಗಳು ಇಂದು ಹಾಜರಾಗಿದ್ದಾರೆ, ಶೌಚಾಲಯ ಸ್ವಚ್ಛತೆ, ಹೊಸ ಹಾಸಿಗೆ,ಸೇರಿದಂತೆ ಕೇಲವು ಕೆಲಸಗಳು ಮಾಡಿದ್ದಾರೆ ಇದು ಕೇವಲ ಒಂದೆರಡು ದಿನಕ್ಕೆ ಸೀಮಿತವಾಗಬಾರದು ಎಲ್ಲಾ ಸಿಬ್ಬಂದಿಗಳು ಪ್ರತಿದಿನ ಹಾಜರಿರಬೇಕು ಎಂದರು.ಸ್ಥಳಕ್ಕೆ ಆಗಮಿಸಿದ ತಾಲೂಕ ವೈದ್ಯಾಧಿಕಾರಿ ಬನದೇಶ್ವರ ನಮ್ಮ ಹಂತದ ಎಲ್ಲಾ ಸಮಸ್ಯೆಗಳನ್ನ ಎರಡು ದಿನಗಳ ಒಳಗಾಗಿ ಪರಿಹರಿಸಲಾಗುವುದು ಎಂದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೋರಾಟಗಾರರು ತಕ್ಷಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರುಬೇಡಿಕೆಗಳ ಕುರಿತು ವೈದ್ಯಾಧಿಕಾರಿ ಮತ್ತು ಎಲ್ಲಾ ಸಿಬ್ಬಂದಿಗಳ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಆರೋಗ್ಯ ಕೇಂದ್ರದಲ್ಲಿ ಸಭೆ ಮಾಡಿದ ತಾಲೂಕ ವೈದ್ಯಾಧಿಕಾರಿ ಮತ್ತೆ ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟಗಾರರನ್ನ ಮನಹೊಲಿಸಲು ಪ್ರಯತ್ನಿಸಿದರು. ಇಗಿರುವ ವೈದ್ಯಾಧಿಕಾರಿಯನ್ನ ಪೂರ್ಣ ಪ್ರಮಾದ ಅಧಿಕಾರ ನೀಡಿ ದೇವದುರ್ಗ ಬಿಟ್ಟು ಜಾಲಹಳ್ಳಿಯಲ್ಲೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ,ಎರವಲು ಸೇವೆಗೆ ನಿಯೋಜನೆಗೊಂಡ ಸ್ಟಾಪ್ ನರ್ಸ್ ಅವರನ್ನ ಎರಡು ದಿನಗಳ ಒಳಗಾಗಿ ವಾಪಿಸ್ ಕರಿಸಿಕೊಳ್ಳಲಾಗುವುದು, ದ್ವಿತೀಯ ಧರ್ಜೆ ಸಹಾಯಕರಾದ ಮಹ್ಮದ್ ಪರ್ವೇಜ್ ಅವರನ್ನ ತಕ್ಷಣದಿಂದ ಹಾಜರಾಗುವಂತೆ ಆದೇಶ ನೀಡಲಾಗಿದೆ, ಸಿಬ್ಬಂದಿ ಗೈರಾದರೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಅವರ ಸಂಬಳವನ್ನ ಕಡಿತಮಾಡಲು ಪೂರ್ಣಪ್ರಮಾಣದ ಅಧಿಕಾರವನ್ನ ವೈದ್ಯಾಧಿಕಾರಿಗೆ ನೀಡಲಾಗಿದೆ ಎಂದುರು.ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಸ್ವಚ್ಛತೆ ಶುದ್ದ ಕುಡಿಯುವ ನೀರು ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಹೆಚ್ಚುವರಿಯಾಗಿ ಇಬ್ಬರು ಸ್ಟಾಪ್ ನಿರ್ಸಗಳನ್ನ ನೀಡಲಾಗುವುದು, ಕಾರ್ಯನಿರತ ಸಿಬ್ಬಂದಿಗಳ ವಿವರವನ್ನ ನಾಮಫಲದಲ್ಲಿ ಅಳವಡಿಸಲಾಗುವುದು ಸೇರಿದಂತೆ ಪತ್ರದ ಮೂಲಕ ಲಿಖಿತ ಭರವಸೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ದೂರವಾಣಿ ಕರೆ ಮುಖಾಂತರ ಮಾತನಾಡಿ ಇದೆ ಸೋಮುವಾರ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ ನಂತರ ಧರಣಿಯನ್ನ ಹಿಂಪಡೆಯಲಾಯಿತು.ಇದೆ ಸಂಧರ್ಭದಲ್ಲಿ ಡಿವೈಎಫ್ಐ ಅದ್ಯಕ್ಷರಾದ ರಿಯಾಜ್ ಆರ್ತಿ, ರೈತ ಸಂಘಟನೆಯ ಅದ್ಯಕ್ಷರಾದ ಹನುಮಂತ ಗುರಿಕಾರ,ದುರುಗಪ್ಪ ಹೊರಟ್ಟಿ, ಮೌನೇಶ ದಾಸರ್,ರಂಗನಾಥ ಬುಂಕಲದೊಡ್ಡಿ,ಜಿಲ್ಲಾ ಮುಖಂಡರಾದ ನರಸಣ್ಣ ನಾಯಕ, ಶಬ್ಬೀರ್, ಮುಖಂಡರಾದ ಮಕ್ತುಮ್ ಭಾಷಾ,ಹನುಮಂತ ಮಡಿವಾಳ,ಶಿರಾಜ್ಜುದ್ದಿನ್,ನಬಿಸಾಬ್,ಹನುಮಂತ ಗಣೇಕಲ್, ಮೌನೇಶ, ಭೀಮಣ್ಣ ಡೆಂಗಿ,ಕಲಿಂ,ಶಿವಪ್ಪ ಉದ್ಭಾಳ,ರಿಯಾಜ್,ಶಾಹೀದ್, ರಂಗನಾಥ ಬೀಸಲ್,ರಂಗಪ್ಪ ಕುದುರಿ,ಸೇರಿದಂತೆ ಅನೇಕರು ಭಾಗವಹಿಸಿದ್ದರು.
