
ಉದಯವಾಹಿನಿ ಮಾಲೂರು:- ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಗೇರುಪುರ ಗ್ರಾಮದ ಅಶ್ವತಮ್ಮ ಇಂಜಿನಿಯರ್ ರಾಮಯ್ಯ ರವರಿಗೆ ಯಾದವ ಸಂಘದ ಅಧ್ಯಕ್ಷರಾದ ಆಲಗೊಂಡನಹಳ್ಳಿ ಗೋವಿಂದಪ್ಪ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆ ತಿಳಿಸಿದರು.ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾ.ಪಂ ಎರಡನೆಯ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶ್ರೀಯುತ ಗೇರುಪುರ ಗ್ರಾಮದ ಅಶ್ವತಮ್ಮ ಇಂಜಿನಿಯರ್ ರಾಮಯ್ಯರವರು ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡಲಿ, ಇವರ ಅವಧಿಯಲ್ಲಿ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಅಭಿವೃದ್ಧಿ ಕಾಣಲಿ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಯಾದವ ಸಂಘದ ಅಧ್ಯಕ್ಷ ಆಲಗೊಂಡನಹಳ್ಳಿ, ಗೋವಿಂದಪ್ಪ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಂಘದ ಖಜಾಂಚಿ, ಹೆಡಗಿನ ಬೆಲೆ ಎಚ್. ಸಿ.ನಾರಾಯಣಸ್ವಾಮಿ, ತೊರ‍್ನಹಳ್ಳಿಗ್ರಾ.ಪಂ.ಸದಸ್ಯರಾದ ಎ. ಮಂಜುನಾಥ್, ಸಂತೋಷ್, ಶ್ರೀನಿವಾಸ್ ಉಪಸ್ಥಿತರಿದ್ದರು.
