
ಉದಯವಾಹಿನಿ,ಚಿಂಚೋಳಿ :ಇಂದ್ರಧನುಷ್ ಲಸಿಕೆ ಪಡೆಯುವುದರಿಂದ ಸಿಡಬು,ಕ್ಷಯ,ದಡಾರ,ಹೆಪಟೈಟಿಸ್-ಬಿ, ಡಿಪ್ತೀರಿಯಾ,ನಾಯಿಕೆಮ್ಮು,ಪೋಲಿಯೋ, ಧನುರ್ವಾಯು ಒಳಗೊಂಡತೆ ಹೀಗೆ ಹತ್ತಾರು ಮರಣಾತಿಂಕ ರೋಗಗಳು ತಡೆಗಟ್ಟುತ್ತದೆ ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ಹೇಳಿದರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸೋಮವಾರ ಇಂದ್ರಧನುಷ್ ಲಸಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಂದ್ರಧನುಷ್ ಲಸಿಕೆ ಪಡೆಯುವುದರ ಮೂಲಕ ಆರೋಗ್ಯಕರ ಮಕ್ಕಳು ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದರು. ಟಿಹೆಚ್ಓ ಡಾ.ಮಹ್ಮುದ್ ಗಫಾರ ಮಾತನಾಡಿ ಅಗಷ್ಟ್ 7ರಿಂದ ಇಂದ್ರಧನುಷ್ ಲಸಿಕೆ ಚಾಲನೆ ನೀಡಿ ಅ.12ರವರೆಗೆ ಹಾಗೂ ಸೆಪ್ಟೆಂಬರ್ 11ರಿಂದ 16ರವರೆಗೆ ಅಕ್ಟೋಬರ್ 9ರಿಂದ 14ರವರೆಗೆ ನಡೆಯುವ ಅಭಿಯಾನವನ್ನು ಸದುಪಯೋಗ ಪಡೆದುಕೊಳ್ಳಬೇಕು. ತಾಲ್ಲೂಕಿನಲ್ಲಿ ಒಟ್ಟು 278055ಜನಸಂಖ್ಯೆ ಹೊಂದಿದ್ದು,ಗರ್ಭಿಣಿಯರು 195ಜನ ಇದ್ದಾರೆ,2ವರ್ಷದೊಳಗಿನ 756 ಮತ್ತು 2ರಿಂದ 5ವರ್ಷದೊಳಗಿನ 241ಲಸಿಕೆ ವಂಚಿತ ಮಕ್ಕಳು,ತಾಯಿ ಮತ್ತು ಮಗುವಿನ ಒಟ್ಟು 149ಲಸಿಕಾ ಸತ್ರಗಳು ಆಯೋಜಿಸಿ 45ಲಸಿಕಾ ತಂಡದ ಸಿಬ್ಬಂದಿ ಹಾಗೂ 15ಮೇಲ್ವಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ.ತಾಲ್ಲೂಕಾ ಆಸ್ವತ್ರೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ,ಸಮೂದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರುತ್ತದೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೂಡದೆ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಆಸ್ವತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಪಾಟೀಲ,ಸಿಡಿಪಿಒ ಗುರುಪ್ರಸಾದ,ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಡಾ.ಅನೀಲಕುಮಾರ,ಮಹೇಶ್ವರಿ ಮೋರೆ,ಬಿಇಓ ನೀಲಕಂಠ ಜಾಧವ,ನಿರೀಕ್ಷಣಾಧಿಕಾರಿ ಶಕುಂತಲಾ,ಅನೇಕರಿದ್ದರು.
