
ಉದಯವಾಹಿನಿ ಕೋಲಾರ :- ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ವಿಜಯನಗರ ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ನಾರಾಯಣಮ್ಮ ಆಯ್ಕೆಯಾಗಿದ್ದಾರೆ. ಒಟ್ಟು 20 ಸದಸ್ಯ ಬಲ ಹೊಂದಿರುವ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಗುರುವಾರ ನಡೆಯಿತು.ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯನಗರ ಮಂಜುನಾಥ್ 12 ಮತಗಳು ಪಡೆದು ಜಯಶಾಲಿಯಾದರೆ, ಶ್ರೀನಿವಾಸ್ ಯಾದವ್ 8 ಮತಗಳನ್ನು ಪಡೆದು ಪರಾಭವಗೊಂಡರು ಮತ್ತು ಉಪಾಧ್ಯಕ್ಷ ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾರಾಯಣಮ್ಮ 11 ಮತ ಪಡೆದು ವಿಜಯನಗೆ ಬೀರಿದರು, ಸುಜಾತ 9 ಮತಗಳನ್ನು ಪಡೆದು ಪರಾಭವಗೊಂಡರು*
ಚುನಾವಣೆ ಫಲಿತಾಂಶವನ್ನು ಚುನಾವಣಾಧಿಕಾರಿ ಹರಿಪ್ರಸಾದ್ ಪ್ರಕಟಿಸುತ್ತಿದ್ದಂತೆ ಗ್ರಾಮ ಪಂಚಾಯಿತಿ ಕಚೇರಿ ಹೊರಭಾಗದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ವಿಜಯನಗರ ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ಜಯಗಳಿಸಲು ಸಾಧ್ಯವಾಗಿದ್ದು ಎಲ್ಲಾ 20 ಗ್ರಾಮ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಂಚಾಯಿತಿಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ನಿಸ್ವಾರ್ಥ ಪ್ರಯತ್ನ ಮಾಡುತ್ತೇನೆ ಎಂದರು.
ಜಿದ್ದಾಜಿದ್ದು ಕೇವಲ ಚುನಾವಣೆವರೆಗೂ ಮಾತ್ರ ಇರಬೇಕು. ಚುನಾವಣೆ ಮುಗಿದ ನಂತರ ಎಲ್ಲರೂ ಒಂದಾಗಿ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಮತ್ತು ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಿ ಎಲ್ಲರ ಸಹಕಾರದಿಂದ ಪಂಚಾಯಿತಿಯನ್ನು ಅಭಿವೃದ್ಧಿಪಥದತ್ತ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದ ಅವರು ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ರಾಮಕೃಷ್ಣ, ಗ್ರಾ ಪಂ ಸದಸ್ಯರು ಚಲಪತಿ, ಚೋಟಿಮಾ.ಪುಷ್ಪ, ರಾಜೇಶ್, ನಿಂಗಪ್ಪ, ಪ್ರಕಾಶ್,ವೆಂಕಟಮ್ಮ,ಅಕ್ರಮ್, ಮುನಿಯಪ್ಪ, ಜಯಮ್ಮ ಮುಖಂಡರಾದ ಬಾಬರ್, ಪ್ರಸಾದ್, ಬಸವಣ್ಣ, ಜಾಫರ್, ಮಂಜುನಾಥ್, ನಗರಸಭಾ ಸದಸ್ಯ ಅಪ್ಸರ್, ಕುಮಾರ್, ದೊಡ್ಡಣ್ಣ, ವರದೇನಹಳ್ಳಿ ವೆಂಕಟೇಶ್, ಮಾರ್ಜೇನಹಳ್ಳಿ ಬಾಬು, ಶ್ಯಾಂ, ಭರತ್ ರಘು, ಫಾರೂಕ್ ಯೂತ್ ಕಾಂಗ್ರೇಸ್ ಮುಖಂಡರು ಇತರರು ಹಾಜರಿದ್ದರು.
