
ಉದಯವಾಹಿನಿ ಸಿರುಗುಪ್ಪ : ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಪಿಂಜಾರಗೇರಿ) ಶಾಲೆಯ ಶಾಲಾ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಖಾದರ್ ಭಾಷಾ ಹಾಗೂ ಉಪಾಧ್ಯಕ್ಷರಾಗಿಪಿ.ಹೇಮಣ್ಣ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಇಮಾಮ್ ಹುಸೇನ್ ಹಾಗೂ ಸದಸ್ಯರುಗಳಾದ ಅಬೀಬ್ ಭಾಷಾ, ಶಾಕೀರಾಬೀ, ಬಿ.ಬಸವರಾಜ, ಎಂ.ಪೀರುಸಾಬು, ಬಸವರಾಜೇಶ್ವರಿ, ಕಾಮಾಕ್ಷಿ ,ಬಿ.ನಾಗರಾಜ , ಹುಲಿಗೆಮ್ಮ , ಜೆ.ಖಾಶಿಂಬೀ.ಮುಖಂಡರುಗಳಾದ ಎಂ.ಎಸ್. ಬಂದೇನವಾಜ್ , ಹೆಚ್. ಮಾಬುಸಾಬು , ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ.ಖಾದರ್ ವಲಿ, ಎನ್.ಮಾಬುಸಾಬು ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಗಳಾದ ಕೆ.ನಾಗರಾಜ ಶಿಕ್ಷಕರಾದ ಹೆಚ್.ರಾಘಮ್ಮ , ಟಿ.ಸಿದ್ದಯ್ಯ ಮುಂತಾದವರು ಉಪಸ್ಥಿತರಿದ್ದರು.
