ಉದಯವಾಹಿನಿ ದೇವದುರ್ಗ: ಮುಸ್ಟೂರ್ ಗ್ರಾಮದಲ್ಲಿ ಪ್ರಾರಭಿಸಿರುವ ಮುಖ್ಯ ರಸ್ತೆ ಕಾಮಗಾರಿ ಹಾಗೂ ಚರಂಡಿಯ ಕಾಮಗಾರಿಗಳು ಎಸ್ಟಿಮೆಂಟ್  ನಡೆಯದೆ ಸಂಪೂರ್ಣ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿದ್ದು  ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ತೆಡೆದು ಸೆಕ್ಷನ್ ಜೆಇ ಚಂದ್ರಕಾಂತ ಮತ್ತು ಗುತ್ತೆದಾರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಜಯ ಕರ್ನಾಟಕ ಸ೦ಘಟನೆಯ  ಮುಸ್ಟೂರ  ಗ್ರಾಮ ಘಟಕದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ ಚನ್ನಮಲ್ಲಪ್ಪ ಗಂಟೆ ಅವರಿಗೆ ಮನವಿ ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕಾಮಗಾರಿ ಹಂತದ ಚರಂಡಿಯಲ್ಲಿ ಓರ್ವ ಬಾಲಕನು ಬಿದ್ದು ಅಸ್ವಸ್ಥತೆಗೆ ಒಳಗಾಗಿರುವ ಘಟನೆ ಕುರಿತು ನಮ್ಮ ಗ್ರಾಮಸ್ಥರು ನಮ್ಮ ಸಂಘಟನೆ ಪದಾಧಿಕಾರಿಗಳು ಸೇರಿ ಮೇಲಾಧಿಕಾರಿಗಳನ್ನು ಬೇಟಿ ಮಾಡಿ ಹೇಳಿದರು ನಮ್ಮ ಮನವಿಗೆ ಕ್ಯಾರೆ ಎನ್ನದೆ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವರ್ತನೆಗೆ ಬೇಸರ ಗೊಂಡು ತಮಗೆ ಮನವಿ ಸಲ್ಲಿಸುತ್ತಿದ್ದೇವೆ ತಾವುಗಳು ತಕ್ಷಣ ಸಂಬಂದಿಸಿದ ಕಾಮಗಾರಿಯನ್ನು
ತಡೆಗಟ್ಟಿ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿರುವ ಸಂಘಟನೆಕಾರರು ನಿರ್ಲಕ್ಷ ವಹಿಸಿದ್ದಲ್ಲಿ ನಮ್ಮ ತಾಲೂಕು ಸಂಘಟನೆಯ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ,ಈ ಸಂದರ್ಭದಲ್ಲಿ ಚಂದ ಹುಸೇನ್‌, ಮುದುಕಪ್ಪ ಭೋವಿ, ಶ್ರೀಕಂಠಪ್ಪ ಪೂಜಾರಿ, ತಿಪ್ಪಣ್ಣ ಚಲುವಾದಿ, ರಂಗಪ್ಪನಾಯಕ, ಅಯ್ಯಣ್ಣನಾಯಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!