
ಉದಯವಾಹಿನಿ ದೇವರಹಿಪ್ಪರಗಿ: ಆಧುನಿಕ ಕಾಲದಲ್ಲಿ ಮಕ್ಕಳ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದ್ದು ಅನೇಕ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಮಕ್ಕಳ ಆರೋಗ್ಯ ತುಂಬಾನೇ ಮುಖ್ಯವಾಗಿದೆ, ಪಾಲಕರು ಮಕ್ಕಳ ಕಡೆಗೆ ಗಮನ ಹರಿಸಿ ಮಕ್ಕಳ ಚಂಚಲ ಮನಸ್ಸು ಸದೃಢವಾಗಬೇಕು ಎಂದು ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳಾದ ಡಾ.ಶ್ವೇತಾ ಹೇಳಿದರು.ತಾಲೂಕಿನ ಕೊಂಡಗೂಳಿ ಗ್ರಾಮದ ಕೇಶಿರಾಜ ಪ್ರೌಢಶಾಲೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಇವರ ಸಹಯೋಗದಲ್ಲಿ ಶುಕ್ರವಾರದಂದು ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಯುವಕರೇ ದೇಶದ ಮುಂದಿನ ಪ್ರಜೆಗಳಾಗಿ ಕಾಣುತ್ತಾರೆ ಆದಕಾರಣ 10 ರಿಂದ 19 ವರ್ಷದ ಮಕ್ಕಳಿಗೆ ಪಾಲಕರು ನಿರ್ಲಕ್ಷಿಸದೆ ಅವರ ಪಾಲನೆ ಪೋಷಣೆ ಆರೋಗ್ಯಕರವಾಗಿರಲು ತುಂಬಾ ಶ್ರಮ ಪಡಬೇಕು ಎಂದು ತಿಳಿಸಿದರು.
ನಂತರ ಆಪ್ತ ಸಮಾಲೋಚಕರಾದ ಅಪ್ಪಸಾಬ ಮಾಂಗ ಮಾತನಾಡಿ, ಹದಿಹರೆಯದವರಿಗೆ ದೈಹಿಕ, ಮಾನಸಿಕ ಸಮಸ್ಯೆ ಬಗ್ಗೆ ವೈಯಕ್ತಿಕ ಸ್ವಚ್ಛತೆ, ಮದ್ರಾಸ್ ಐ ರೋಗ ಲಕ್ಷಣಗಳ ಕುರಿತು ಹಾಗೂ ಪ್ರತಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ್ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಎಸ್ ಬಿ ಬಿರಾದಾರ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಡಾ. ಪ್ರಿಯಾಂಕ, ಎಂ ಡಿ ಮೋತಿಬಾಯಿ, ಸುನಿಲ್ ಧನಪಾಲ, ಎಂ ಎಂ ಹಂಡೆಬಾಗ, ಜ್ಯೋತಿ ತಳ್ಳೋಳ್ಳಿ, ಚಂದ್ರು ಕಾಳೆ ಆರತಿ, ಶಾಲಾ ಶಿಕ್ಷಕರಾದ ಬಿ ಬಿ ಬಾಗೇವಾಡಿ, ಆರ್ ಎಸ್ ಭಜಂತ್ರಿ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮದ ಪ್ರಮುಖರು, ಗಣ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
