ಉದಯವಾಹಿನಿ ದೇವನಹಳ್ಳಿ:  ತಾಲೂಕಿನ ಚನ್ನಹಳ್ಳಿ  ಪ್ರೌಢಶಾಲಾ ಆವರಣದಲ್ಲಿ ನಡೆಯುತ್ತಿರುವ ಚನ್ನರಾಯಪಟ್ಟಣ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಯಲಿಯೂರು ಸರ್ಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳು  ಕಬಡ್ಡಿ ಪಂದ್ಯದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮಟ್ಟದಲ್ಲಿ ನಡೆಯುತ್ತಿರುವ ಕ್ರೀಡಾ ಕೂಟದಲ್ಲಿ ಯಲಿಯೂರು ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳು  ಕಬಡ್ಡಿ  ಸೇರಿದಂತೆ ಅನೇಕ  ಪಂದ್ಯಗಳಿಗೆ ಭಾಗವಹಿಸಿದ್ರು, ಸುಮಾರು ಎರಡು ವರ್ಷಗಳಿಂದ ಈ ಶಾಲೆಗೆ ದೈಹಿಕ ಶಿಕ್ಷರರು ಇಲ್ಲದೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳಲ್ಲಿ ಬೇಸರವಿದೆ, ವಿಧ್ಯಾರ್ಥಿಗಳು ಈ ಬಾರಿ ಶತಯ ಗತಾಯ ಗೆಲ್ಲಲೇ ಬೇಕೆಂಬ ಛಲದಿಂದ ಸ್ವಯಂ ಕೃತ ವಾಗಿ  ಗಿರೀಶ್ ಕೃಷ್ಣ ಆರ್ ಎಂಬುವರಿಂದ  ಕಬಡ್ಡಿ ಪಂದ್ಯಕ್ಕೆ ಮಾರ್ಗದರ್ಶನ ಪಡೆದು  ಹೋಬಳಿ ಮಟ್ಟಕ್ಕೆ ಭಾಗವಹಿಸಿದ್ರು.
ಹೋಬಳಿ ಮಟ್ಟದಲ್ಲಿ  ಮುರಾರ್ಜಿ ದೇಸಾಯಿ ವಸತಿಶಾಲೆ  ದೇವನಾಯಕನಹಳ್ಳಿ, ಇವರ ಮೇಲೆ ಮೊದಲ ಹಂತದ ಪಂದ್ಯದಲ್ಲಿ, ರಾಮಕೃಷ್ಣ ಪ್ರೌಢಶಾಲಾ ಬೆಟ್ಟಕೊಟೆ ಎರಡನೆ ಹಂತದ ಪಂದ್ಯಗಳಲ್ಲಿ ಜಯಗಳಿಸಿದ ನಂತರ,ಸೆಮಿಫೈನಲ್ ಲಗ್ಗೆ ಹಿಟ್ಟು, ಸನ್ ರೈಸ್ ಇಂಟರ್ ನ್ಯಾಷನಲ್ ಸ್ಕೂಲ್ ಗಂಗವಾರ ಶಾಲೆಯ ವಿದ್ಯಾರ್ಥಿಗಳನ್ನು ಮಣಿಸಿ
 ಫೈನಲ್‌ ಮ್ಯಾಚ್ ನಲ್ಲಿ  ಬೂದಿಗೆರೆಯ ಸ್ಟರ್ಲಿಂಗ್ ಶಾಲೆಯನ್ನು ಸೋಲಿಸಿ  ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರ ಗಿರೀಶ್ ಕೃಷ್ಣ ಆರ್ ರವರಿಗೆ   ಮುಖ್ಯ ಶಿಕ್ಷಕ ಹೊನ್ನಪ್ಪ ಹಾಗೂ ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು  ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!