ಉದಯವಾಹಿನಿ ಕೆ.ಆರ್.ಪೇಟೆ: ದೇಶದ ಭವಿಷ್ಯ ತರಗತಿ ಕೋಣೆಗಳಲ್ಲಿ ರೂಪುಗೊಳ್ಳುವ ಮೂಲಕ ಲಕ್ಷಾಂತರ ಮಕ್ಕಳ ಜ್ಞಾನಾರ್ಜನೆಗೆ ಶಾಲಾ ಕೊಠಡಿಗಳು ಅವಶ್ಯಕವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಯನ್ನು ಉಧ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ಸಾರ್ವಜನಿಕರು ಇಂಗ್ಲೀಷ್ ವ್ಯಾಮೋಹ ಬಿಟ್ಟು ಉತ್ತಮವಾಗಿ ವ್ಯಾಸಂಗ ಮಾಡಿಸುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು ಉಯ್ಗೋನಹಳ್ಳಿ ಶಾಲೆಯಲ್ಲಿ ಮಕ್ಕಳ ಕಲಿಕೆ, ಶಿಸ್ತು, ಬದ್ದತೆ ಮುಂತಾದುವುಗಳು ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎಂಬAತೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಶಾಲೆಯ ಜಾಗ ಚಿಕ್ಕದಾಗಿದ್ದರು ಸುಂದರವಾದ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ಹಾಕಿದ್ದಾರೆ. ತಾಲ್ಲೂಕಿನ ಯಾವುದೇ ಶಾಲೆಗೂ ಶೌಚಾಲಯ, ಕುಡಿಯುವ ನೀರು ಕಡ್ಡಾಯವಾಗಿ ಇರುವಂತೆ ಗ್ರಾಮ ಪಂಚಾಯಿತಿಗಳು ನೋಡಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ಇಲ್ಲಿನ ನೂತನ ಶಾಲಾಕಟ್ಟಡವನ್ನು ಗುತ್ತಿಗೆದಾರರಾದ ರಮೇಶ್ ಮತ್ತು ಸತೀಶ್ ಬಹಳ ಗುಣಮಟ್ಟದಿಂದ ನಿರ್ಮಿಸಿದ್ದಾರೆ. ಉಯ್ಗೋನಹಳ್ಳಿ ಅತ್ತಿಮರುವನಹಳ್ಳಿ ಮಾರುತಿನಗರ ನಾನು ಹೆಚ್ಚಾಗಿ ಇಷ್ಟಪಡುವ ಗ್ರಾಮಗಳಾಗಿವೆ. ಇದೇ ರೀತಿ ಎಲ್ಲಾ ಗ್ರಾಮಸ್ಥರು ಪಕ್ಷಭೇಧ ಮರೆತು ಅನ್ಯೋನ್ಯವಾಗಿ ಸಹಬಾಳ್ವೆಯಿಂದ ಇರಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿ ಶಾಸಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ವಿಶೇಷ ಆಸಕ್ತಿ ಇದ್ದು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾಗಿರುವ ಹೊಸ ಕಟ್ಟಡವನ್ನು ಬಹಳ ಅಚ್ಚುಕಟ್ಟಗಿ ನಿರ್ಮಿಸಲಾಗಿದೆ. ಈ ಶಾಲೆಯ ಮಕ್ಕಳಮನೆಗೆ ಒಂದು ಲಕ್ಷ ರೂಪಾಯಿಗಳ ಅನುದಾನ ಬಂದಿದ್ದು ಅದನ್ನು ಉಪಯೋಗಿಸಿಕೊಂಡು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಂಧಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯಗಿರೀಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್, ಗ್ರಾಪಂ ಸದಸ್ಯರುಗಳಾದ ರೂಪಮಹದೇವ್, ನವೀನ್, ಆಶಾಸೋಮಶೇಖರ್, ಕುಮಾರ್, ಲಾವಣ್ಯ, ಸುಮಲತಾ, ಉನ್ನತೀಕರಣ ಸಮಿತಿಯ ಅಧ್ಯಕ್ಷ ಮಹದೇವ್, ಡೈರಿಅಧ್ಯಕ್ಷೆ ನಿರ್ಮಲ, ಲೋಕೋಪಯೋಗಿ ಇಲಾಖೆಯ ಎಇಇ ರಾಜಶೇಖರ್, ಜೆಇ ಶಿವಕುಮಾರ್, ಗುತ್ತಿಗೆದಾರ್ ಸತೀಶ್, ಬಿಆರ್‌ಪಿಮಂಜು, ಸಿ.ಆರ್.ಪಿಮಹೇಶ್, ಶಾಲಾ ಮುಖ್ಯಶಿಕ್ಷಕಿ ಮಂಜಮ್ಮ ಶಿಕ್ಷಕರಾದ ಎನ್.ವಿ.ಬಾಬು, ಹೆಚ್.ಜಿ.ನಾಗೇಂದ್ರ, ಅನಿತ, ಶಾಸಕರ ಆಪ್ತ ಸಹಾಯಕರಾದ ಪ್ರದೀಪ್, ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.
