ಉದಯವಾಹಿನಿ ನಾಗಮಂಗಲ : ಅಕ್ಕಪಕ್ಕದ  ಶತ್ರು ರಾಷ್ಟ್ರಗಳು ನಮ್ಮ ದೇಶದ ಲಕ್ಷಾಂತರ ಚದುರ ಕಿಲೋಮೀಟರ್ ಭೂಭಾಗಗಳನ್ನು  ವಶಪಡಿಸಿಕೊಂಡಿವೆ ಆದರೂ ಹಿಂದೂಗಳಾದ ನಾವು ಮೈಮರೆತು ಮಲಗಿದ್ದೇವೆ ಎಂದು ಬಜರಂಗದಳ ಜಿಲ್ಲಾ ಸಹಸಂಯೋಜಕ ಶಶಿಕಿರಣ್  ವಿಷಾದ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು  ಇಂದು ನಮ್ಮ ದೇಶದ ಭೂಪಟವನ್ನು ನೋಡಿದರೆ ಬಹಳ ಬೇಸರವಾಗುತ್ತದೆ ನೂರೂ ವರ್ಷಗಳಿಂದೀಚೆಗೆ ಆಫ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ಥಾನ, ಮ್ಯಾನ್ಮಾರ್, ಶ್ರೀಲಂಕಾ, ನೇಪಾಳ, ಚೀನಾ ಆಕ್ರಮಿತ ಲಡಾಕ್, ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಲಕ್ಷಾಂತರ ಚದುರ ಕಿಲೋಮೀಟರ್ ನಷ್ಟು ಹಲವು ಭೂಭಾಗಳನ್ನು ಕಳೆದುಕೊಂಡಿದ್ದೇವೆ ಹಾಗೆಯೆ ಇಂದಿಗೂ ಕಳೆದುಕೊಳ್ಳುತ್ತಿದ್ದೇವೆ ಆದರೂ ಹಿಂದೂಗಳಾದ ನಾವು ಮೈಮರೆತು ಕುಳಿತಿದ್ದೇವೆ.
ಸಾವಿರಾರು ವರ್ಷಗಳಿಂದ ಡಚ್ಚರು, ಫ್ರಂಚರು, ಮೊಘಲರು, ಪಟಾಣರು ಸೇರಿದಂತೆ ಸಾವಿರಾರು ಆಕ್ರಮಣಕಾರರು ಭಾರತದ ನಾಶಕ್ಕಾಗಿ ಹಲವು ರೀತಿ ದಾಳಿಮಾಡಿ ನಮ್ಮ ಸಂಪತ್ತನ್ನು ಲೂಟಿ ಮಾಡಿ ದೋಚಿರುವ ಜೊತೆ ನಮ್ಮ ಭೂಭಾಗಳನ್ನೂ ವಶಪಡಿಸಿಕೊಂಡಿದ್ದಾರೆ ಇವೆಲ್ಲಾ ಸಾಲದಂತೆ ಸ್ವಾತಂತ್ರ್ಯಾ ನಂತರ ನಮ್ಮನ್ನಾಳಿದ ಕಾಂಗ್ರೆಸ್ ರಾಜಕೀಯ ನಾಯಕರುಗಳು ಅಖಂಡಭಾರತವನ್ನು
ತುಂಡರಿಸಿ ಬಿಟ್ಟರು ನಮ್ಮದೇ ಹಿಂದೂಗಳ ಪವಿತ್ರ ಸ್ಥಳ ಮಾನಸ ಸರೋವರಕ್ಕೆ ತೆರಳಲು ಚೀನಾಗೆ ತೆರಿಗೆಹಣ ನೀಡಿ ಹೋಗುವಂತೆ ಮಾಡಿಬಿಟ್ಟಿದ್ದಾರೆ.ಇಂದು ನಾವು ಎಚ್ಚೆತ್ತುಕೊಳ್ಳುವ ಜೊತೆ ಹಿಂದೂಗಳು ಒಟ್ಟಾಗ ಬೇಕಿದೆ.ಇದೇ ತಿಂಗಳ 14 ನೇ ಸೋಮವಾರ ಮಧ್ಯಾಹ್ನ 1 ಗಂಟೆಗೆ  ಪಟ್ಟಣದ ಟಿ.ಬಿ.ಸರ್ಕಲ್ ನಿಂದ ಸೌಮ್ಯಕೇಶವಸ್ವಾಮಿ ದೇವಾಲಯದವರೆಗೆ ಅಖಂಡ ಭಾರತ ಸಂಕಲ್ಪ ದಿವಸ್ ಅಂಗವಾಗಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥಸ್ವಾಮಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಹಾಗೂ ಆದಿಚುಂಚನಗಿರಿ ಶ್ರೀಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ವಿ.ಹಿ.ಪರಿಷದ್ ತಾಲ್ಲೂಕು ಅಧ್ಯಕ್ಷ ಅಜೀತ್ ಪ್ರಸಾದ್ ಜೈನ್, ಮುಖ್ಯ ಅತಿಥಿಯಾಗಿ ಮಧು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಭಾಗವಹಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಬಜರಂಗದಳ ತಾಲ್ಲೂಕು ಸಂಯೋಜಕ ಮಹೇಶ್, ವಿ.ಹಿ.ಪ.ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ ಹಾಗೂ ಸೋಮಶೇಖರ್ ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!