ಉದಯವಾಹಿನಿ,ಕಾರಟಗಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರಟಗಿಯ ಜಮದಗ್ನಿ ಚೌಡ್ಕಿ ನೇಮಕಗೊಂಡಿದ್ದಾರೆ.
ಗಂಗಾವತಿ ನಗರದ ಕೃಷ್ಣ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪದಾದಿಕಾರಿಗಳ ಸಮಾರಂಭದಲ್ಲಿ ರಾಜ್ಯ ಸಮಿತಿ ಅಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಅವರು ಕೊಪ್ಪಳ ಜಿಲ್ಲಾ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಜಮದಗ್ನಿ ಚೌಡಕಿ ಅವರನ್ನು ನೇಮಿಸಿ ಆದೇಶ ಹೊರಡಿಸಿದರು.
ನಂತರ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತತ್ವ ಮತ್ತು ಸಿದ್ಧಾಂತಕ್ಕೆ ಎಲ್ಲರೂ ಬದ್ದರಾಗಿ ಕಾರ್ಯನಿರ್ವಹಿಸಬೇಕು. ಸಮುದಾಯದ ಸಂಘಟನೆ, ಹೋರಾಟ, ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸಂಘಟನೆ ಕಟ್ಟಲು ನಿಷ್ಠರಾಗಿರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷನಾಗಿ ನೇಮಕಗೊಂಡಿರುವ ಜಮದಗ್ನಿ ಸಂಘಟನಾ ಚಾತುರ್ಯ ಹೊಂದಿರುವ ಪ್ರತಿಭಾವಂತ ಯುವಕನಾಗಿದ್ದು ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಭರವಸೆ ಇದೆ ಎಂದು ಆಶಯ ವ್ಯೆಕ್ತಪಡಿಸಿದರು.
ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಜಮದಗ್ನಿ ಚೌಡಕಿ ಮಾತನಾಡಿ ಸಂಘಟನೆಯು ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ,ಶೈಕ್ಷಣಿಕ ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಕಾರಟಗಿ ತಾಲೂಕಾಧ್ಯಕ್ಷನನ್ನಾಗಿ ಹುಲ್ಲೇಶ್ ಬುಕ್ಕನಟ್ಟಿ, ಗಂಗಾವತಿ ಘಟಕದ ಅಧ್ಯಕ್ಷನನ್ನಾಗಿ ಸುಮಿತ್ರಕುಮಾರ್, ಕನಕಗಿರಿ ಘಟಕಕ್ಕೆ ಅಧ್ಯಕ್ಷನನ್ನಾಗಿ ಮಂಜುನಾಥ್ ಬಡಿಗೇರ್ ಅವರನ್ನು ನೇಮಿಸಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಮುಖಂಡ ಹಂಪೆಸ್ ಹಾರೋಗಲ್, ನರಸಿಂಹಲು ಪಂಪಾಪತಿ ಸಿದ್ದಾಪುರ, ನಗರ ಸಭೆ ಸದಸ್ಯ ದುರ್ಗೇಶ್ ದೊಡ್ಮನಿ, ನಿವೃತ್ತ ತಹಸೀಲ್ದಾರ್ ಗೋಪಾಲ್, ವೆಂಕಟೇಶ್ ನೀರ್ಲೂಟಿ, ವೆಂಕೋಬ ಕಂಪ್ಲಿ, ದುರ್ಗೇಶ್ ಕಜ್ಜಿ, ಸಂಘಟನೆಯ ಮೌನೇಶ್ ಭಜರಂಗಿ, ದುರ್ಗೇಶ್ ಕೆಂಗೇರಿ, ರವಿಕುಮಾರ್, ಅಮೃತಮ್ಮ, ಭೀಮೇಶ್ ಬೂದಗುಂಪಾ, ಶರಣಪ್ಪ ಬೂಧಗುಂಪಾ, ವೀರೇಶ್, ವೆಂಕಟೇಶ್ ಹುಳ್ಕಿಹಾಳ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!