ಉದಯವಾಹಿನಿ ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆಯಾದ ಮಂಜುಳ, ಕರುನಾಡು ಮಹಿಳಾ ಸಂರಕ್ಷಣಾ ಸಮಿತಿ ಅಧ್ಯಕ್ಷರು ಪದ್ಮ ವರ್ತೂರು ,ರವರು ದಿ ಇಂಡಿಯ ಸಿಮೆಂಟ್ ಲಿಮಿಟೆಡ್ ಸಂಸ್ಥೆ ವಿರುದ್ದ ಮತ್ತು ದಲಿತ ಮಹಿಳೆ ನಿಂದಿಸಿದ ಹೊನ್ನೆಗೌಡರವರನ್ನು ಬಂಧಿಸಿಸುವ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.ಇದೇ ಸಂದರ್ಭದಲ್ಲಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಂಜುಳರವರು ಮಾತನಾಡಿ ಬೂದಿಗೆರೆ ಮತ್ತು ದೇವನಹಳ್ಳಿ ರಸ್ತೆ ಅವಲಹಳ್ಳಿ ಪೂಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿ ಇಂಡಿಯ ಸಿಮೆಂಟ್ ಲಿಮಿಟೆಡ್ ಸಂಸ್ಥೆಯು ಅಪ್ತಾಪ್ತ ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಂಡು ಕಾರ್ಮಿಕ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ದಿನಾಂಕ 5ತಾರೀಖು ಕೆಲಸ ಮಾಡಿಕೊಂಡು ಇದ್ದ ಬಾಲಕ ಸಿಮೆಂಟ್ ಕಲೆಸುವ ಕೈ ಸಿಲುಕಿ ಕೈ ಕಟ್ ಆಗಿ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿರುತ್ತದೆ. ಈ ಸಂಭಂದ ಕುರಿತು ಸಾಮಾಜಿಕ ಹೋರಾಟಗಾರ್ತಿಯಾದ ನಾನು ಕೇಳಲು ಹೋದಾಗ ಸ್ಥಳೀಯ ಮುಖಂಡ ಹೊನ್ನೇಗೌಡರವರು ನನಗೆ ಜಾತಿ ನಿಂದನೆ, 40ಕ್ಕೂ ಹೆಚ್ಚು ರೌಡಿಗಳನ್ನು ಕರೆಸಿ ನನ್ನ ಹಲ್ಲೆ ಮಾಡಿರುತ್ತಾರೆ. ಇದರ ಕುರಿತು ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ದಲಿತ ಮಹಿಳೆ ಎಂದು ನೋಡದೇ ತಡರಾತ್ರಿ 1ಗಂಟೆವರಗೆ ನಮ್ಮನ್ನ ಪೊಲೀಸ್ ಠಾಣೆಯಲ್ಲಿ ಕುಳಿಸಿಕೊಂಡಿರುತ್ತಾರೆ. ದಿ ಇಂಡಿಯ ಸಿಮೆಂಟ್ ಲಿಮಿಟೆಡ್ ಹಲವಾರು ದುರಂತಗಳು ಸಂಭವಿಸಿದೆ ಅದರು ಯಾವುದೇ ಕ್ರಮವಾಗಿಲ್ಲ .ರೌಡಿ ವರ್ತನೆ ತೋರಿದ ಹೊನ್ನೇಗೌಡನನ್ನ ಬಂಧಿಸಬೇಕು ಮತ್ತು ದಿ ಇಂಡಿಯ ಸಿಮೆಂಟ್ ಲಿಮೆಟೆಡ್ ಮೇಲೆ ಕ್ರಮ ಕೈಗೊಂಡು ಕೈಕಟ್ ಆದ ಬಾಲಕನಿಗೆ ತತಕ್ಷಣ ಪರಿಹಾರ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!