ಉದಯವಾಹಿನಿ ಬೆಂಗಳೂರು:  ಪ್ರಸ್ ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಕಾಂಗ್ರೆಸ್ ಪಕ್ಷದ ಮುಖಂಡರು ನಗುತಾ ರಂಗನಾಥರವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು ನಜೀರಅಹ್ಮದ ಅಬ್ಬಾಸಅಲಿ ಕಂಗನೊಳ್ಳಿ, ಸಾ: ಜಮಖಂಡಿ, ಜಿ: ಬಾಗಲಕೋಟ ಇವರನ್ನು ಕರ್ನಾಟಕ ವಿಧಾನ ಪರಿಷತ್ತ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು.ಶ್ರೀ ನಜೀರಅಹ್ಮದ ಅಬ್ಬಾಸಅಲಿ ಕಂಗನೊಳ್ಳಿ ಸಾ: ಜಮಖಂಡಿ, ಜಿ: ಬಾಗಲಕೋಟ ಇವರು ಜಿಲ್ಲೆಯ ಕಾಂಗ್ರೇಸ್ ಪಕ್ಷದ ಉಪಾಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು. ಇವರು ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃಧ್ದಿ ನಿಗಮ ನಿಯಮಿತ ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಜವಳಿ ಕ್ಷೇತ್ರದಲ್ಲಿ ಕರ್ನಾಟಕದಾದ್ಯಂತ ಅತ್ಯುತ್ತಮ ಕಾರ್ಯಮಾಡಿದ್ದಾರೆ.
ಸನ್ ೧೯೯೦ ರಿಂದ ೧೯೯೮ ರ ವರೆಗೆ ಜಮಖಂಡಿ ತಾಲೂಕಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ನಂತರ ಬಾಗಲಕೋಟ ಜಿಲ್ಲಾ ಯುವ ಕಾಂಗ್ರೇಸ್ ಸಮೀತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಏಳಿಗೆಗಾಗಿ ಹಲವಾರು ಸಂಘಟನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದು. ಯುವ ಕಾಂಗ್ರೇಸ್ ಸಮಾವೇಶಗಳು ವಿವಿಧ ರೀತಿಯ ಶಿಬಿರಗಳು ಮಹಾತ್ಮ ಗಾಂಧಿಜಿ, ದಿ: ಶ್ರೀಮತಿ ಇಂದಿರಾಗಾAಧಿ ಮತ್ತು ದಿ: ರಾಜೀವಗಾಂಧಿಯವರ ಜನ್ಮ ದಿನಾಚಾರಣೆ, ಪುಣ್ಯತಿಥಿಗಳ ಅಂಗವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಹಾಗೂ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ ಹಾಗೂ ಇವರು ಕರ್ನಾಟಕ ಸರಕಾರದ ತುಂಗಭದ್ರಾ ಕಾಡಾ ಯೋಜನೆ ಮುನಿರಾಬಾದ ಇದರ ಸದಸ್ಯರಾಗಿ ೫ ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹಾಗೂ ಸರ್ಕಾರದ ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿಯ ಸದಸ್ಯರಾಗಿ ಈ ಭಾಗದ ಒಳನಾಡು ಮೀನುಗಾರರ ಏಳ್ಗೆಗಾಗಿ ಹಲವಾರು ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಜಮಖಂಡಿ ಪ್ರತಿಷ್ಠಿತ ಪಿ.ಬಿ ಕಾಲೇಜಿನ ಅಧ್ಯಕ್ಷರಾಗಿ ಹಾಗೂ ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮುಸ್ಲಿಂ ಅಲ್ಪಸಂಖ್ಯಾತರಿಗೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸ್ಥಾನ ಮಾನ ಸಿಕ್ಕಿರುವುದಿಲ್ಲ.
ಆದ್ದರಿಂದ ಶ್ರೀ ನಜೀರಅಹ್ಮದ ಅಬ್ಬಾಸಅಲಿ ಕಂಗನೊಳ್ಳಿ ಇವರನ್ನು ಕೂಡಲೇ ಕರ್ನಾಟಕ ವಿಧಾನ ಪರಿಷತ್ತ ಸದಸ್ಯರನ್ನಾಗಿ ಸರಕಾರದಿಂದ ನಾಮಕರಣ ಮಾಡುವಂತೆ ಎ.ಐ.ಸಿ.ಸಿ. ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆರವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ರಾಮಯ್ಯ ರವರಿಗೆ, ಉಪ ಮುಖ್ಯಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವುಕುಮಾರ ರವರಿಗೆ ಹಾಗೂ ರಾಜ್ಯದ ಗೃಹ ಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ|| ಜಿ. ಪರಮೇಶ್ವರ ರವರಿಗೆ ಹಾಗೂ ಕಾಂಗ್ರೇಸ ಪಕ್ಷದ ಎಲ್ಲ ಮುಖಂಡರಿಗೆ ಒತ್ತಾಯಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!