ಉದಯವಾಹಿನಿ, ಕರಬೂಜದ ಹಣ್ಣು ಬಹಳ ಜನಪ್ರಿಯ ಹಾಗೂ ಎಲ್ಲರೂ ಇಷ್ಟಪಡುವ ಹಣ್ಣು ಈ ಶೀತೋಷ್ಣ ಗುಣವುಳ್ಳದ್ದು. ಈ ಹಣ್ಣು ಬಹಳ ಬೇಗ ಜೀರ್ಣವಾಗುತ್ತದೆ. ಶರೀರಕ್ಕೆ ಸೇರಿರುವ ಕಲ್ಮಷಗಳನ್ನು ಹೋಗಲಾಡಿಸುತ್ತದೆ. ಮೂತ್ರ ಕೋಶದಲ್ಲಿನ ಹರಳನ್ನು ಕರಗಿಸುತ್ತದೆ. ಮೂತ್ರ ವಿಸರ್ಜನೆ ಸುಲಭವಾಗಿ ಆಗುವಂತೆ ಮಾಡುತ್ತದೆ. ಹಾಲುಣಿಸುವ ತಾಯಂದಿರಿಗೆ ಎದೆಯ ಹಾಲು ವೃದ್ಧಿಸುತ್ತದೆ.
ಪೋಷಕಾಂಶಗಳು: ಕರಬೂಜದ ಹಣ್ಣಿನಲ್ಲಿರುವ ಪೋಷಕಾಂಶಗಳು ಯಾವುದೆಂದರೆ, ತೇವಾಂಶ, ಸಸಾರಜನಕ, ಕೊಬ್ಬು ಶರ್ಕರಪಿಷ್ಠ, ಸುಣ್ಣ, ರಂಜಕ, ಕಬ್ಬಿಣ, ಕೆರೊಟಿನ್, ಥಯಾಮಿನ್, ನಿಯಾಸಿನ್ ಹಾಗೂ ಎ ಮತ್ತು ಸಿ ಜೀವಸತ್ವಗಳು. ೧. ವೀರ್ಯವೃದ್ಧಿ: ಕರಬೂಜದ ಬೀಜಗಳು ಮಧುಮೇಹ ರೋಗವನ್ನು ಶಾಂತ ಗೊಳಿಸುತ್ತದೆ. ವೀರ್ಯವನ್ನು ಶುದ್ಧಿಗೊಳಿಸುತ್ತದೆ, ಸಂತಾನಭಾಗ್ಯ ಸುಗಮವಾಗುತ್ತದೆ.
೨. ಮೂತ್ರ ಕೋಶದ ಸಮಸ್ಯೆ, ಮೂತ್ರ ಹಾಗೂ ವೀರ್ಯಶುದ್ಧಿ: ಕರಬೂಜದ ಹಣ್ಣಿನ ಬೀಜದ ಚೂರ್ಣ ತಯಾರಿಸಿದ್ದನ್ನು, ಪ್ರತಿನಿತ್ಯ ಜೇನುತುಪ್ಪದೊಡನೆ ಸೇವಿಸುವುದರಿಂದ, ಮೂತ್ರಕೋಶದ ಸಮಸ್ಯೆ, ಮೂತ್ರ ಹಾಗೂ ವೀರ್ಯವನ್ನು ಶುದ್ಧೀಕರಿಸಲು ಸಹಾಯವಾಗುತ್ತದೆ.
೩. ಈ ಹಣ್ಣನ್ನು ಊಟದ ನಂತರ ಸೇವಿಸಿದರೆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕಫ ಪ್ರಕೃತಿಯವರು ಅತಿಯಾಗಿ ಸೇವಿಸಬಾರದು. ಸ್ವಲ್ಪ, ಸ್ವಲ್ಪ ಸೇವಿಸಿದರೆ ಉತ್ತಮ.
೪. ಮಲಬದ್ಧತೆ ನಿವಾರಣೆ: ಮಲಬದ್ಧತೆ ಇರುವವರಿಗೆ ಹಣ್ಣು ಒಳ್ಳೆಯದು. ಆದರೆ ಅತಿಯಾಗಿ ಸೇವಿಸಿದರೆ ಬೇಧಿಯಾಗುತ್ತದೆ.
ವಿವಿಧ ರೀತಿ: ಕರಬೂಜದ ಜಾತಿಗೆ ಸೇರಿದ ಇನ್ನೊಂದು ಹಣ್ಣು ಕೆಕ್ಕರಿಕೆ ಹಣ್ಣು, ಸಿದ್ದೋಟ ಹಣ್ಣು ಎಂದೂ ಕರೆಯುತ್ತಾರೆ. ನೋಡಲು ಹಾಗೂ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಆದರೆ ಗುಣದಲ್ಲಿ ಎರಡೂ ಒಂದೇ. ಇದರ ಬೀಜವೂ ಸಹ ಕರಬೂಜದ ಹಣ್ಣಿನ ಬೀಜದ ರೀತಿ ಉಪಯೋಗಕ್ಕೆ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!