
ಉದಯವಾಹಿನಿ ಇಂಡಿ : ಇಂಡಿ ತಾಲೂಕಿನಲ್ಲಿ ಜ್ಞಾನದಾತರಾದ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಜನರಿಗೆ ದಾರಿ ದೀಪವಾಗಿದ್ದರು. ಅವರ ಜೀವನವೇ ಸ್ಪೂರ್ತಿಗಾದೆ ಎಂದು ವಿಜಯಪುರದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ಪಟ್ಟಣದ ಜಿ.ಆರ್.ಜಿ ಕಲಾ,ವಾಯ್.ಎ.ಪಾಟೀಲ ವಾಣಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಕಸಾಪ ಇಂಡಿ ತಾಲೂಕು ಘಟಕದ ವತಿಯಿಂದ ನಡೆದ ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಝಳಕಿಯ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಅರಳಿ ಮಾತನಾಡಿ ಶ್ರೀಗಳು ಪೌರಾತ್ಯ ಮತ್ತು ಪಾಶ್ಚಾಮಾತ್ಯ ತತ್ವಗಳ ಅಧ್ಯಯನ ಮಾಡಿದ ವಿಶ್ವಶ್ರೇಷ್ಠ ಸಂತರು. ಅವರು ತಮ್ಮ 19 ನೆಯ ವಯಸ್ಸಿನಲ್ಲಿ ಸಿದ್ದಾಮತ ಶಿಖಾಮಣ ರಚಿಸಿದ ಶ್ರೇಷ್ಠರು.ಎಲ್ಲರನ್ನು ಸಮನಾಗಿ ನೊಡಿಕೊಂಡು ಸಾತ್ವಿಕ ಬೋಧನೆ ಮಾಡಿದವರು. ವೇದ ಉಪನಿಷತ್ತ ಗಳನ್ನು ಸಾಮಾನ್ಯ ಭಾಷೆಯಲ್ಲಿ ನೀಡಿದ ಸಂತರು. ೧೨ ಶತಮಾನದಲ್ಲಿ ಇರುವ ಶರಣ ಸಾಹಿತ್ಯ ೨೧ ನೆಯ ಶತಮಾನದಲ್ಲಿ ನೀಡಿದ್ದಾರೆ. ಒಳ್ಳೆಯದು ಹೇಳುವದು ಆಗಿದೆ. ಆದರೆ ಅದು ಈಗ ಅನುಷ್ಠಾನಗೊಳ್ಳಬೇಕು ಎಂದು ಬದಲಾವಣೆ ಪರ,ಸಮಾನತೆಯ ಪರ ಶ್ರಮಿಸಿದರು ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಇಂಡಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.
ವೇದಿಕೆಯ ಮೇಲೆ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ,ಇಂಡಿ ತಾಲೂಕಾ ಕ.ರಾ.ಸರಕಾರಿ ,ಇಂಡಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಬೆರಗು ಪ್ರಕಾಶನ ಸಂಚಾಲಕ ಡಾ|| ರಮೇಶ ಕತ್ತಿ, ಶ್ರೀ ಸತ್ಯ ಸಾಯಿ ಜಿಲ್ಲಾ ಮಹಿಳಾ ಸೇವಾ ಸಂಚಾಲಕರು ಗಂಗಾಬಾಯಿ ಗಲಗಲಿ, ನಿವೃತ ಔಷಧ ಸಂಯೋಜಕರು ಎಸ್.ಜಿ.ವಾಲಿ, ಪ್ರಾಚಾರ್ಯ ಎಸ್.ಬಿ.ಜಾಧವ ಮತ್ತಿತರಿದ್ದರು.
ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ನಮನ ಕಾರ್ಯಕ್ರಮದಲ್ಲಿ ಮಹಿಬೂಬ ಜಿದ್ದಿ,ಶ್ರೀಮತಿ ಆರ್.ಬಿ.ತಳವಾರ,ಸಂಗಮೇಶ ಕರೆಪ್ಪಗೋಳ,ಕುಮಾರಿ ಆಶ್ವರ್ಯ ಕುಂಬಾರ,ರಾಘವೇAದ್ರ ದೇಶಪಾಂಡೆ,ಶರಣ ಬಸವರಾಜ ಪಾಟೀಲ,ಪಾರ್ವತಿ ಸೊನ್ನದ,ದಾನಮ್ಮ ಹಿರೆಪಟ್ಟ,ರವಿ ಮುಂದೆವಾಡಿ,ನಿರ್ಮಲಾ ಹಂಜಗಿ,ಸರೋಜಿನಿ ಮಾವಿನಮರ,ಕುಮಾರಿ ಶೀಲಾ ಡಂಗಿ,ವಿ.ಎಸ್.ದಸ್ತರೆಡ್ಡಿ,ಪಾವ್ತಿ ದಳವಾಯಿ,ರೇಣುಕಾ ಸಂಖ,ಆರ್.ಎಸ್.ಮಾರನೂರ,ಜಿ.ಡಿ.ಕಾ oಬಳೆ,ರಾಜಶ್ರೀ ಕ್ಷತ್ರಿ,ಸುಮಂಗಲಾ ನಿಂಬಾಳ,ಬಸವರಾಜ ಕಿರಣಗಿ ಕಾವ್ಯ ಮತ್ತು ಗೀತ ವಚನ ಮಾಡಿದರು.
ವಾಯ್.ಬಿ.ಪಾಟೀಲ ಸ್ವಾಗತಿಸಿದರು.ಆಯ್.ಎಸ್.ಮಾಶ್ಯಾಳ ನಿರೂಪಿಸಿದರು.
