
ಉದಯವಾಹಿನಿ ನಾಗಮಂಗಲ :ತಾಲೂಕಿನ ಸುಪುತ್ರರಾಧ ನಾಗತಿಹಳ್ಳಿಯ ಗ್ರಾಮದ ವಿರೂಪಾಕ್ಷ ಮೂರ್ತಿಯವರಿಗೆ ಈ ಬಾರಿಯ ಸ್ವತಂತ್ರೋತ್ಸವ ಸನ್ಮಾನಕ್ಕೆ ಬಾಜನರಾಗಿದ್ದು ಪ್ರಧಾನಮಂತ್ರಿ ಮೋದಿ ಅವರಿಂದ ಪಡೆದುಕೊಳ್ಳಲಿದ್ದಾರೆ.ನಾಗಮಂಗಲ ತಾಲೂಕಿನ ನಾಗತಿಹಳ್ಳಿಯ ಹೊನ್ನಾಚಾರ್ ಅವರಪುತ್ರಎನ್.ಹೆಚ್.ವಿರೂಪಾಕ್ಷಮೂರ್ತಿ .ಮುಂಚಿನಿಂದಲೂ ಗ್ರಾಮಮುಖೀಚಿಂತಕರಾ ಗಿದ್ದರು. ಸರಕಾರಿ ನೌಕರಿಯಿಂದ ನಿವೃತ್ತರಾದ ಮೇಲೆ ಊರು ಸೇರಿ ಒಂದು ತಪಸ್ಸಿನಂತೆ ಸಾವಯವ ಕೃಷಿಗಿಳಿದರು.ಈ ಒಂದು ಕೃಷಿಯ ಫಲ ಇಂದು ಫಲ ಕೊಟ್ಟಿದೆ. ಈ ಬಾರಿಯ ಸ್ವತಂತ್ರೋತ್ಸವದಂದು ದೆಹಲಿಯಲ್ಲಿ ಪ್ರಧಾನಿ ಮಂತ್ರಿ ಮೋದಿಯವರಿಂದ ಸನ್ಮಾನಿತರಾಗುತ್ತಿದ್ದಾರೆ.ಸರ್ಕಾರಿ ನೌಕರರಾಗಿ ನಿವೃತ್ತಿ ಘೋಷಿಸಿಕೊಂಡು ನಂತರ ಕಾಯಕಯೋಗಿ ಕೃಷಿಯನ್ನು ನಂಬಿ ದೂರದ ಊರಿಂದ ನಮ್ಮಂತಹ ಹಳ್ಳಿ ರೈತರನ್ನ ಗುರುತಿಸಿ ನೀಡುತ್ತಿರುವ ಸನ್ಮಾನ ಮುಂದಿನ ದಿನಗಳಲ್ಲಿ ಗ್ರಾಮೀಣ ಕೃಷಿಕನ ಬದುಕು ಹಸನ್ಗುವುದರಲ್ಲಿ ಹೊಸ ಬೆಳವಣಿಗೆಯಾಗಲಿದೆ ಎಂದು ಸನ್ಮಾನಿತರು ಮಾಧ್ಯಮದೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಈ ನಮ್ಮ ತಾಲೂಕಿನ ನಮ್ಮ ಗ್ರಾಮದ ಈ ಹೆಮ್ಮೆಯ ಸಾಧಕರಿಗೆ ನಾಗಮಂಗಲ ತಾಲೂಕಿನ ಹಿರಿಮೆಯಾಗಿದ್ದು ತಾಲೂಕಿನ ಜನತೆಯ ಪರವಾಗಿ ಅಭಿನಂದನೆಗಳು.
