
ಉದಯವಾಹಿನಿ ನಾಗಮಂಗಲ: ಜಾತ್ಯತೀತ ಜನತಾದಳದ ನಾಯಕರ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಹಿಂಬಾಲಕರುಗಳು ನಿಂದನೆ ಮಾಡಿದ್ದು ಹಾಗೂ ಸಚಿವರ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದೆಂದು ನಲ್ಲಿಗೆರೆ ಬಾಲಕೃಷ್ಣರವರು ತಿಳಿಸಿದರು.ಅವರು ನಾಗಮಂಗಲದ ಮಾಜಿ ಶಾಸಕರ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಮ್ಮ ಪಕ್ಷದ ನಾಯಕರು ಹಾಗೂ ಮಾಜಿ ಶಾಸಕರುಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದು ಇದರ ವಿರುದ್ಧ ಹಾಗೂ ಕ್ಷೇತ್ರದ ಸಚಿವರಾದ ಚೆಲುವರಾಯಸ್ವಾಮಿ ಅವರ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಜೊತೆಗೆ ಅವರ ವಿರುದ್ಧ ದೂರು ನೀಡಲಾಗುವುದೆಂದು ಮಾತನಾಡಿದರು.ಜೆಡಿಎಸ್ ಪಕ್ಷವು ಕ್ಷೇತ್ರದಲ್ಲಿ ಸೋತಿರಬಹುದು ಆದರೆ ಮಲಗಿಲ್ಲ ಪಕ್ಷದ ಬಗ್ಗೆ ಹಾಗೂ ರಾಜ್ಯದ ನಾಯಕರುಗಳ ಬಗ್ಗೆ ನಿಂದಿಸುವುದು ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಶೋಭೆ ತರುವಂತಹ ಕೆಲಸ ಮಾಡುತ್ತಿಲ್ಲ ಇಂಥವರ ವಿರುದ್ಧ ಶುಕ್ರವಾರ 18ರಂದು ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಇವರುಗಳಿಗೆ ತಕ್ಕ ಉತ್ತರ ನೀಡಲಾಗುವುದೆಂದು ತಿಳಿಸಿದರು.ತಾಲೂಕಿನ ಪಕ್ಷದ ಮುಖಂಡರುಗಳು ಕಾರ್ಯಕರ್ತರು ದಿನಾಂಕ 18ರಂದು ಆಗಮಿಸುವ ಮುಖಾಂತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಡಿ.ಟಿ ಶ್ರೀನಿವಾಸ್ ಚಂದ್ರು ನಾಗೇಶ್ ಹಾಗೂ ಪಕ್ಷದ ಅನೇಕ ಮುಖಂಡರು ಹಾಜರಿದ್ದರು
