
ಉದಯವಾಹಿನಿ ಕೋಲಾರ :- ತಾಲೂಕಿನ ನರಸಾಪುರ ಗ್ರಾಪಂ ಗೆ 2ನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನರಸಾಪುರ ಗ್ರಾಮದ ಕೃಷ್ಣಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಖಾಜಿಕಲ್ಲಹಳ್ಳಿ ಗ್ರಾಮದ ಪದ್ಮಮ್ಮ ಆಯ್ಕೆಯಾಗಿದ್ದು ಸೋಮವಾರ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
ಈ ಸಮಯದಲ್ಲಿ ಸದಸ್ಯರುಗಳಾದ ಕೆಇಬಿ ಚಂದ್ರು, ಕೆ ಗೋಪಿನಾಥ್, ಎನ್ ಎಂ ಕುಮಾರ್, ಎನ್ ಆರ್ ಪ್ರಭಾಕರ್, ಎಸ್ ಮುನಿರಾಜು, ಕೆ ಎಂ ಚಂದ್ರಪ್ಪ, ಎನ್ ಗಾಯತ್ರಿ, ಅಮರಾವತಿ ಮತ್ತು ಟಿ.ಎಂ ತಬಸುಂ ಖಾನಂ ಮತ್ತು ಗ್ರಾಮದ ಹಿರಿಯರು, ಮುಖಂಡರುಗಳು, ಹಾಗೂ ಯುವಕರು ಹಾಜರಿದ್ದರು.
