
ಉದಯವಾಹಿನಿ, ಔರಾದ್ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಮಾನವೀಯ ಮೌಲ್ಯ ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್, ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಈಚೇಗೆ ನಡೆದ `ಮೇರಿ ಮಾಟಿ ಮೇರಾ ದೇಶ” ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರೂ ನಮ್ಮ ನೆಲ ಮತ್ತು ಜಲಕ್ಕೆ ಉತ್ತಮ ಹೆಸರು ತರುವಂತಹ ಕೇಲಸ ಮಾಡಬೇಕು ಎಂದು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಜುಕುಮಾರ ಜುಮ್ಮಾ ಮಾತನಾಡಿ, ದೇಶವನ್ನು ಯೋಧ ಕಾಪಾಡಿದರೆ ಈ ದೇಶದ ಮಣ್ಣನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತು ಭೂ ತಾಯಿಯ ರಕ್ಷಣೆಗೆ ಮುಂದಾಗೋಣ ಮಣ್ಣು, ಸಸ್ಯ ಹಾಗೂ ನೀರಿನ ಅಗತ್ಯವನ್ನು ಅರಿತು ರಕ್ಷಣೆ ಮಾಡಲು ಮುಂದಾದಾಗ ಮಾತ್ರ ಪ್ರಗತಿಯನ್ನು ಸಾಧಿಸಬಹುದು ಎಂದರು.ಕಾಲೇಜಿನ ಪ್ರಾಂಶುಪಾಲ ಸೂರ್ಯಕಾಂತ ಚಿದ್ರೆ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅನೇಕರ ಪಾತ್ರ ಮಹತ್ತರವಾಗಿದೆ. ಅನೇಕ ಹೋರಾಟಗಾರರ ತ್ಯಾಗ, ಬಲಿದಾನಗಳ ಪ್ರತೀಕವಾಗಿ ದೇಶ ಸ್ವಾತಂತ್ರ್ಯವಾಗಿದೆ ಎಂದರು.ಪ್ರಮುಖರಾದ ಪ್ರೋ. ವಿನಾಯಕ ಕೊತ್ತಮೀರ್, ಪ್ರೋ. ಅಂಬಿಕಾ ಕೊತ್ತಮೀರ್, ಊರ್ವಶಿ ಕೊಡ್ಲಿ, ಡಾ. ಜೈಶೀಲಾ, ಡಾ. ಸಂಜುಕುಮಾರ ತಾಂದಳೆ, ಜೈಪ್ರಕಾಶ ಆರ್ಯ, ಸಚಿದಾನಂದ ರುಮ್ಮಾ ಸೇರಿದಂತೆ ಕಾಲೇಜಿನ ಸಿಬ್ಬಂದಿಗಲೂ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಪ್ರೋ. ಡಾ. ಅಶೋಕ ಕೋರೆ ಸ್ವಾಗತಿಸಿ, ನಿರೂಪಿಸಿದರು. ಪ್ರೊ. ಸುನಿಲ ವಂದಿಸಿದರು.
