
ಉದಯವಾಹಿನಿ,ಕಾರಟಗಿ: ಪಟ್ಟಣದಲ್ಲಿ ಪದವಿಪೂರ್ವ ಕಾಲೇಜು ಆವರಣದ ಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್ ಮತ್ತು ಪುರಸಬೇ ಸಂಯುಕ್ತಾಶ್ರಯದಲ್ಲಿ ನಡೆದ 77ನೇ ಸ್ವಾತಂತ್ರೋತ್ಸವ ಅಂಗವಾಗಿ ತಹಶೀಲ್ದಾರ ಎಮ್. ಕುಮಾರಸ್ವಾಮಿ ಧ್ವಜಾರೋಹಣ ಮಾಡಿದರು.
ನಂತರ 77 ನೇ ವರ್ಷದ ಸ್ವಾತಂತ್ರೋತ್ಸವದ ಶುಭಾಶಯ ತಿಳಿಸಿ ಮಾತನಾಡಿದ ಅವರು ಸ್ವಾತಂತ್ರೋತ್ಸವಕ್ಕಾಗಿ ಹಲವು ಮಾಹಾತ್ಮರ ಹುತಾತ್ಮರ ತ್ಯಾಗ ಬಲಿದಾನದ ಪ್ರತೀಕವಾಗಿ ನಾವು ಇಂದು ಆ. ೧೫. ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೆವೆ.
ಮಹನೀಯರ, ಮಾಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸುತ್ತ ಅವರ ಮಾರ್ಗದರ್ಶನದಲ್ಲಿ ನಡೆದು ನಾವೆಲ್ಲರೂ ನಮ್ಮ ದೇಶವನ್ನು ಮುನ್ನಡೆೆಸೋಣಾ. ಎಂದರು. ತಾ.ಪಂ. ಇ.ಓ ಎನ್ ನರಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರೋತ್ಸವದ ಎಂಬುವುದು ನಮ್ಮ ಹೆಮ್ಮೆ. ಈ ಶುಭ ಸಂದಬ್ದಲ್ಲಿ ಎಲ್ಲಾ ಸ್ವಾತಂತ್ರೋತ್ಸವ ಸೇನಾನಿಗಳ ಸ್ಮರಣೆ ಮಾಡುವುದು ನಮ್ಮ ಜವಾಬ್ದಾರಿ. ಸ್ವಾತಂತ್ರö್ಯದ ಹಾದಿ ಹೂವಿನ ಮೆತ್ತೆಯಾಗಿರಲಿಲ್ಲಾ ಅದೆಷ್ಟೋ ಜನ ಮಹನೀಯರ ತ್ಯಾಗ ಬಲಿದಾನ ಹೋರಾಟದ ಫಲವಾಗಿ ಲಭಿಸಿದ ಬಿಡುಗಡೆ ಇದು. ದೇಶವನ್ನುಸ್ವತಂತ್ರಗೊಳಿಸಲು ಅದೆಷ್ಟೋ ಮಹನೀಯರು ತಮ್ಮ ಬದುಕನ್ನೆ ಗಂಧದAತೆ ತೇಯಿಸಿದ್ದಾರೆ. ರಕ್ತವನ್ನು ಬೆವರಂತೆ ಬಸಿದಿದ್ದಾರೆ. ದೇಶಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಪ್ರಾಣವನ್ನೆ ಭಾರತ ಮಾತೆಗೆ ಅರ್ಪಿಸಿದ್ದಾರೆ ಸ್ವಾತಂತ್ರö್ಯ ಸಂಗ್ರಾಮದ ಒಂದೊAದು ಕ್ಷಣವನ್ನು ನೆನೆಪಿಕೊಳ್ಳುವಾಗಲು ದೇಶಪ್ರೇಮದ ಕಿಚ್ಚು ನಮ್ಮಲ್ಲಿ ಅಧಿಕವಾಗುತ್ತಲೇ ಸಾಗುತ್ತದೆ. ತಮ್ಮ ಉಸಿರು ಉಸಿರಿನಲ್ಲೂಸ್ವಾತಂತ್ರೋತ್ಸವ ಕಿಚ್ಚಿನೊಂದಿಗೆ ಮುನ್ನುಗಿದ ಇಂತಹ ಸಾಹಸಿಗಳ ಫಲವಾಗಿಯೆ ನಾವಿಂದು ಸ್ವಾತಂತ್ರೋತ್ಸವ ಸವಿಯನ್ನು ಅನುಭವಿಸುತ್ತಿದ್ದೆವೆ ಎಂದರು. ಪ್ರಮುಖರಾದ ನ್ಯಾವಾದಿ ಶಿವರೆಡ್ಡಿ ನಾಯಕ, ಮುಖಂಡ ಶರಣಪ್ಪ ಪರಕಿ, ಮಾತನಾಡಿದರು. ಇದಕ್ಕೂ ಮುಂಚೆ ಸ್ಕೌಟ್ಸ್ ಗೈಡ್ಸ ಮಕ್ಕಳಿಂದ ಹಾಗೂ ಶಾಲಾವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಪಿ.ಐ. ಸಿದ್ಧರಾಮಯ್ಯ ಬಿ.ಎಮ್, ಪುರಸಭೆ ಮುಖ್ಯಾಧಿಕಾರಿ ಷಣ್ಮುಖಪ್ಪ, ಪ್ರಮುಖಡಿರು ಇದ್ದರು.
