ಉದಯವಾಹಿನಿ, ಬೆಂಗಳೂರು: ಡೀಪ್ ವ್ಯೂ ಡಿಸ್‌ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.ಸುರಕ್ಷತೆ ಹಾಗೂ ರೆಸ್ಪಾನ್ಸ್ ಫೀಚರ್‌ಗಳನ್ನು ಹೊಂದಿರುವ ಈ ಸ್ಕೂಟರ್ 2.9 ಕಿಲೋ ವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಪ್ರತಿ ಗಂಟೆಗೆ 0 ದಿಂದ 40 ಕಿ.ಮೀ. ವೇಗ ಕ್ರಮಿಸಲು 3.9 ಸೆಕೆಂಡುಗಳು ಮಾತ್ರ ತೆಗೆದುಕೊಳ್ಳುತ್ತದೆ. ಜತೆಗೆ ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ. ವೇಗದಲ್ಲಿ ಸಾಗುವ ಕಾರ್ಯಕ್ಷಮತೆ ಹೊಂದಿದೆ.
ಏಥರ್ 450ಎಸ್ ನಲ್ಲಿ ಹೊಸ ತಂತ್ರಜ್ಞಾನವಾದ ಡೀಪ್ ವ್ಯೂ ಡಿಸ್‌ಪ್ಲೆ ಪರದೆ ಹೊಂದಿದೆ. ಹೊಸ ಸ್ವಿಚ್ ಗೇರ್, ಫಾಲ್ ಸೇಫ್, ತ್ವರಿತ ನಿಲುಗಡೆ ಸಿಗ್ನಲ್ (ಇಎಸ್‌ಎಸ್) ಫೀಚರ್‌ಗಳನ್ನು ಇದು ಹೊಂದಿದೆ. ಹಿಂದಿನ ಮಾದರಿಗಳಿಂಗಿಂತ ಶೇ 7ರಷ್ಟು ದೂರ ಕ್ರಮಿಸುವ ರೇಂಜ್ ಹೆಚ್ಚಳವಾಗಿದೆ. ಇಷ್ಟು ಮಾತ್ರವಲ್ಲ, ತನ್ನ ಏಥರ್ ಗ್ರಿಡ್ ಫಾಸ್ಟ್ ಚಾರ್ಜರ್ ಮೂಲಕ ನಿಮಿಷಕ್ಕೆ 1.5 ಕಿ.ಮೀ. ವೇಗದ ದರದಲ್ಲಿ ಚಾರ್ಜ್ ಮಾಡಬಹುದಾಗಿದೆ. ಏಥರ್ ಸ್ಕೂಟರ್‌ಗಳನ್ನು 115 ಕಿ.ಮೀ. ಹಾಗೂ 145 ಕಿ.ಮೀ. ರೇಂಜ್ ವೇರಿಯಂಟ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
