
ಉದಯವಾಹಿನಿ, ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಜೃಂಭಣೆಯಿಂದ ಸಡಗರದಿಂದ ಸಂಭ್ರಮದಿಂದ 77 ನೆಯ ರಾಷ್ಟ್ರೀಯ ಸ್ವಾತಂತ್ರೋತ್ಸವದ ದಿನಾಚರಣೆ ಕಾಯ೯ಕ್ರಮ ಆಚರಿಸಲಾಯಿತು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹಾತ್ಮರನ್ನು ಡಾಕ್ಟರ್ ಜ್ಯೋತಿ ಬಸರಿಯವರು ಸ್ಮರಿಸಿದರು. ಈ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷ ಆನಂದಕುಮಾರ್ ಮೂಗಬಸವ ಎ ಕೆ ಮುಲ್ಲಾ ಎನ್ ಎ ಪೂಜೇರ ನಿಂಗಣ್ಣಾ ಎಸ್ ಎಸ್ ಹಿರೇಮಠ ರಮೇಶ್ ಗೋವನ್ನವರ ಈರಯ್ಯ ದಿಗಂಬರಮಠ ಮೀನಾಕ್ಷಿ ಪತ್ತಾರ ಮಂಜುಳಾ ಶಿಂಧೆ ಆಶಾ ಕಾರ್ಯಕರ್ತೆಯರ ಉಪಸ್ಥಿತರಿದ್ದರು.
