ಉದಯವಾಹಿನಿ, ತಾಳಿಕೋಟಿ: ದೇಶವನ್ನು ಸ್ವತಂತ್ರಗೊಳಿಸಲು ಬ್ರಿಟಿಷರ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡಿದ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅವರ ಹೋರಾಟದ ಫಲವಾಗಿಯೇ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದೆ ಇದರ ಮಹತ್ವವನ್ನು ತಿಳಿಯುವ ಅಗತ್ಯವಿದೆ ಎಂದು ತಹಸಿಲ್ದಾರ್ ಕೀರ್ತಿ ಚಾಲಕ್ ಹೇಳಿದರು. ಮಂಗಳವಾರ ಪಟ್ಟಣದ ಸರಕಾರಿ ಶಾಲಾ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಭಾರತೀಯರಲ್ಲಿ ದೇಶಭಕ್ತಿ ಜಾಗೃತವಾಗಬೇಕು ಭಾರತೀಯರಾದ ನಾವು ಎಲ್ಲರೂ ಒಂದು ಎಂಬ ಭಾವನೆ ಬರಬೇಕು ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ ಜನಾಂಗದವರು ಒಂದಾಗಿ ಹೋರಾಡಿದ್ದಾರೆ ನಾವೆಲ್ಲರೂ ಯಾವುದೇ ರೀತಿಯ ಭೇದಭಾವ ಮಾಡದೆ ದೇಶದ ಪ್ರಗತಿ ಹಾಗೂ ಉನ್ನತಿಗಾಗಿ ಒಂದಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದರು. ಈ ಸಮಯದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ ಆರ್ ಬಿರಾದಾರ್. ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ಘಟ ಕಾಂಬಳೆ ಮುಖಂಡರಾದ ಬಿಎಸ್ ಪಾಟೀಲ್ ಯಾಳಗಿ ಎಂಕೆ ಜೋರಗಸ್ತಿ ಸಿದ್ದನಗೌಡ ಪಾಟೀಲ್ ವಿಜಯ ಸಿಂಗ್ ಹಜೇರಿ ಎಸ್ ಬಿ ಕಟ್ಟಿಮನಿ ಎಚ್. ಎಸ್. ಪಾಟೀಲ ಖಾಜಾಹುಸೇನ. ಸಗರ ಬಿ. ಎಸ್. ಇಸಾಂಪುರ ಪ್ರಭುಗೌಡ ಮದರ್ ಕಲ್ ಎಂ ಕೆ ಕೆಂಭಾವಿ ಮಂಜುನಾಥ್ ಶೆಟ್ಟಿ ಮಾಸೂಮ್ ಸಾಬ್ ಕೆಂಭಾವಿ ಪ್ರಕಾಶ್ ಹಜೇರಿ ಗಂಗಾಧರ್ ಕಸ್ತೂರಿ ಅಲ್ಲಭಕ್ಷ ನಮಾಜ್ ಕಟ್ಟಿ ಮೈಬೂಬ್ ಷಾ ಮಕಾಂದರ್ ಜೈ ಭೀಮ್ ಮುತ್ತಗಿ ಮೋದಿನ ನಗರ್ಚಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮಾಜಿ ಸೈನಿಕರು ಇದ್ದರು.
