ಉದಯವಾಹಿನಿ, ಔರಾದ್ : ಗ್ರೂಪ್ ಡಿ ನೌಕರರೇ ಆರೋಗ್ಯ ಇಲಾಖೆಯ ನಿಜವಾದ ಆಧಾರ ಸ್ಥಂಭಗಳು, ಇವರ ನಿಸ್ವಾರ್ಥ ಸೇವನೆಯಿಂದ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುವುದು ಎಂದು ಡಾ. ಪ್ರವೀಣಕುಮಾರ ಹೂಗಾರ ಹೇಳಿದರು.
ತಾಲೂಕಿನ ಸಂತಪೂರನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರೂಪ್ ಡಿ ಸಿಬ್ಬಂದಿಗಳು ರೋಗಿಗಳ ಮಲ ಮೂತ್ರಗಳೆನ್ನದೇ ರೋಗ ರುಜಿನಗಳೆನ್ನದೇ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆಯಾಗಿದೆ ದೇವರು ಬಡವರು, ದೀನರು ನಿರ್ಗತಿಕರ ಮಧ್ಯದಲ್ಲೇ ಇರುವವನು. ಅಂಥವರ ಸೇವೆ ಗೈಯುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದು ಹೇಳಿದರು.
ಸ್ತ್ರೀರೋಗ ತಜ್ಞೆ ಡಾ. ಸುಮಯ್ಯಾ ಫಾತಿಮಾ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ವೃತ್ತಿ ಯಾಗಿದ್ದು ಜನರ ಜೀವ ಉಳಿಸುವ ಕೆಲಸ ನಮ್ಮದಾಗಿದೆ ವೃತ್ತಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ರಾಜ್ಯಮಟ್ಟದ ಪ್ರಶಸ್ತಿ ಪಡೆದ ಇಂತಹ ಆಸ್ಪತ್ರೆಯಲ್ಲಿ ಸೇವೆ ಮಾಡುವುದೆಂದರೆ ಅತ್ಯಂತ ಹೆಮ್ಮೆ ಮತ್ತು ಪುಣ್ಯದ ಕೆಲಸ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ಸಿಬ್ಬಂದಿಗಳಾದ ಸುನಿತಾ ಪಾಟೀಲ, ಆಕಾಶ, ಕಿರಣ, ರಾಜು ಪತ್ತಾರ, ಉಮಾಕಾಂತ, ದೀಪಕ, ಅರುಣ, ವಿಜಯಕುಮಾರ, ಶರಣು, ಶಿವಶಂಕರ, ಶ್ರೀಕಾಂತ, ಪಾಂಡು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ. ರೇಣುಕಾ ನಾಗರಾಳಕರ್ ಡಾ. ಮೊಹಮ್ಮದ್ ವಾಜಿದ್ ಡಾ. ರಾಹುಲ್, ಡಾ. ಮಹಿಮಾ, ಡಾ. ಸಚಿನ್, ಕಚೇರಿ ಅಧೀಕ್ಷಕ ರಾಜಶೇಖರ, ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ, ದ್ವಿತೀಯ ದರ್ಜೆ ಸಹಾಯಕ ಸತೀಶ, ಫಾರ್ಮಸಿ ಸಹಾಯಕ ವೈಜಿನಾಥ, ಕ್ಷ ಕಿರಣ ತಂತ್ರಜ್ಞರಾದ ಟಿ.ಎಂ.ಮಚ್ಚೆ, ಆರೋಗ್ಯ ಮಿತ್ರ ರಾಜಪ್ಪಾ ಉದಗೀರೆ, ಶುಶ್ರೂಷಕಾಧಿಕಾರಿಗಳಾದ ಗುರುನಾಥ, ಅಖಿಲ, ಡೇಜಿರಾಣಿ, ಅಂಬಿಕಾ, ಆಶಾಲತಾ, ಜಯಮಾಲಾ, ಸುಕೆಶಿನಿ, ಐಸಿಟಿಸಿಯ ಸುನಿತಾ ಆಶಾಜ್ಯೋತಿ, ಸುನಿತಾ, ವಿಜಯಕುಮಾರ, ಲತಾ, ರಘುನಾಥ್, ಶೃತಿ, ಗುರುನಾಥ, ವೈಭವ, ಸಂಜೀವಕುಮಾರ, ಸಂಗಮೇಶ ಇದ್ದರು.
