ಉದಯವಾಹಿನಿ, ಕುಶಾಲನಗರ : ಹಿಂದೂ ಸಮಾಜ ಜಾಗೃತವಾದಲ್ಲಿ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ದಕ್ಷಿಣ ರಾಷ್ಟಿçÃಯ ಸ್ವಯಂ ಸೇವಕ ಸಂಘುದ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ ಯಾದವ್ ಕೃಷ್ಣ ಅಭಿಮತ ವ್ಯಕ್ತಪಡಿಸಿದರು. ಕುಶಾಲನಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಯ ಆಶ್ರಯದಲ್ಲಿ ಅಝಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಬಾರತದ ಸ್ವಾತಂತ್ರö್ಯ ನಂತರ ಕೆಲವು ನಾಯಕರ ತುಷ್ಟಿಕರಣದ ನಿಲುವುಗಳು ದೇಶದ ವಿಭಜನೆಗೆ ಕಾರಣವಾಯಿತ್ತು.ಆ ದಿನಗಳಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತ್ತು. ಆ ಕರಾಳ ದಿನಗಳು ಇನ್ನು ಮಾಸಿಲ್ಲ ನೆನಪು ಮರುಕಳಿಸುತ್ತದೆ. ದೇಶದ್ ಹಿತದ ಬಗ್ಗೆ ಚಿಂತನೆಯ ಕೊರತೆ ಇದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಕುಶಾಲನಗರದ ಮಾಜಿ ಸೈನಿಕರಾದ ಡಿ.ಕೆ. ಚಿಣ್ಣಪ್ಪ ವಹಿಸಿದ್ದರು ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಅಜಿತ್ ಕುಕ್ಕೇರ. ತಾಲ್ಲೋಕು ಸಂಯೋಜಕರಾದ ಹರೀಶ್ ವೇದಕೆಯಲ್ಲಿದ್ದರು.
ಸಭೆಗೂ ಮುನ್ನ ಕುಶಾಲನಗರ ಮಾರಿಯಮ್ಮ ದೇವಾಲಯದಿಂದ ಹೊರಟ ಪಂಜಿನ ಮೆರವಣಿಗೆಗೆ ಹಿರಿಯರಾದ ಜಿ.ಎಲ್. ನಾಗರಾಜ್ ಚಾಲನೆ ನೀಡಿದರು. ಮುಖ್ಯ ರಸ್ತೆಯಲ್ಲಿ ಸಾಗಿ ಮಾರುಕಟ್ಟೆ ರಸ್ತೆ ಮೂಲಕ ನಂತರ ಐ.ಬಿ. ರಸ್ತೆಯಲ್ಲಿ ತೆರಳಿ ಸಭಾಂಗಣಕ್ಕೆ ಸಾಗಿದರು. ೬೦೦ ಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ( ಕುಶಾಲನಗರದಲ್ಲಿ ಪಂಜಿನ ಮರವಣಿಗೆ ಹಿನ್ನೆಲೆ ಹಿಂದೆAದೂ ಕಾಣದ ಪೋಲಿಸ್ ಭದ್ರತೆ ಕಂಡು ಬಂದಿತ್ತು. ಹೆಚ್ಚುವರಿಯಾಗಿ ನಾಲ್ಕು ಕೆ.ಎಸ್.ಅರ್.ಪಿ. ತುಕಡಿ. ಜಿಲ್ಲಾ ಸಶಸ್ತç ದಳದ ಪೋಲಿಸರು. ಗಡಿ ಆಯ ಕಟ್ಟಿನ ಪ್ರದೇಶದಲ್ಲಿ ಮದ್ಯಾಹ್ನದಿಂದ ಯಾವುದೇ ಅಹಿತಕರ ಘುಟನೆ ನಡೆಯದಂತೆ ಡಿವೈಎಸ್,ಪಿ ನಾಲ್ಕು ಮಂದಿ ಇನ್ಸ್ ಪೆಕ್ಟರ್ ಗಳು ಜಿಲ್ಲೆಯ ವಿವಿಧ ಠಾಣಿಯ ಠಾಣಾದಿಕಾರಿಗಳು ಸೇರಿದಂತೆ ೪೫೦ ಕ್ಕೂ ಹೆಚ್ಚು ಮಂದಿ ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!